ವಾಟ್ಸ್'ಅಪ್' ಮೂಲಕ ಪತ್ನಿಗೆ ತ್ರಿವಳಿ ತಲಾಕ್ ಕಳುಹಿಸಿದ ಟೆಕ್ಕಿ

ತ್ರಿವಳಿ ತಲಾಕ್ ಕುರಿತಂತೆ ದೇಶದಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ವಾಟ್ಸ್ ಅಪ್ ಮತ್ತು ಇಮೇಲ್ ಮೂಲಕ ತಲಾಖ್ ನೀಡಿರುವ ಪ್ರಕರಣಗಳು ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ತ್ರಿವಳಿ ತಲಾಕ್ ಕುರಿತಂತೆ ದೇಶದಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ವಾಟ್ಸ್ ಅಪ್ ಮತ್ತು ಇಮೇಲ್ ಮೂಲಕ ತಲಾಖ್ ನೀಡಿರುವ ಪ್ರಕರಣಗಳು ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿವೆ. 
ಅಮೆರಿಕದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಸಯೀದ್ ಫಯಾಜುದ್ದೀನ್ ಮತ್ತು ಉಸ್ಮಾನ್ ಖುರೇಶಿ ಎಂಬುವವರು ಹೈದರಾಬ್ದ್ ನಲ್ಲಿ ನೆಲೆಸಿರುವ ಪತ್ರಿಯರಿಗೆ ವಾಟ್ಸ್ ಅಪ್ ಮೂಲಕ ವಿಚ್ಧೇದನವನ್ನು ನೀಡಿದ್ದಾರೆ. 
ಹಿನಾ ಫಾತಮಾ ಮತ್ತು ಮಹ್ರೀನ್ ಕೆಲ ವರ್ಷಗಳ ಹಿಂದೆ ಹೈದರಾಬಾದ್ ನ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಸಯ್ಯದ್ ಫಯಾಜುದ್ದೀನ್ ಮತ್ತು ಉಸ್ಮಾನ್ ಖುರೇಶಿ ಕೆಲಸದ ನಿಮಿತ್ತ ಅಮೆರಿಕದ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ. ಖುರೇಶಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ವಾಟ್ಸ್ ಅಪ್ ಮೂಲಕ ಪತ್ನಿಗೆ ಮೂರು ತಲಾಕ್ ಸಂದೇಶ ಕಳುಹಿಸಿದ್ದ. ಇದರಂತೆ ಫಾತಿಮಾ ಹಾಗೂ ಮಹ್ರೀನಾ ಮಾವನ ಮನೆಯವರು ಇದೀಗ ಇಬ್ಬರನ್ನು ಮನೆಯಿಂದ ಹೊರ ಹಾಕಿದ್ದಾರೆ. 
ಮಹಿಳೆಯರಿಗೆ ಮಕ್ಕಳಿದ್ದು, ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ. ತಮ್ಮ ಮಾವನ ಮನೆಯೆದರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಚ್ಛೇದನಕ್ಕೆ ಕುಟುಂಬ ವೈಮನಸ್ಸು ಕಾರಣ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com