ವಾಘಾ ಗಡಿಯಲ್ಲಿ ದೇಶದ ಅತೀ ದೊಡ್ಡ ಧ್ವಜ ಸ್ತಂಭ

ಭಾರತದ ಪಂಜಾಬಿನ ಅಟ್ಟಾರಿ-ವಾಘಾ ಗಡಿಯಲ್ಲಿ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದೆ...
ವಾಘಾ ಗಡಿಯಲ್ಲಿ ದೇಶದ ಅತೀ ದೊಡ್ಡ ಧ್ವಜ ಸ್ತಂಭ
ವಾಘಾ ಗಡಿಯಲ್ಲಿ ದೇಶದ ಅತೀ ದೊಡ್ಡ ಧ್ವಜ ಸ್ತಂಭ
ಚಂಡೀಗಢ: ಭಾರತದ ಪಂಜಾಬಿನ ಅಟ್ಟಾರಿ-ವಾಘಾ ಗಡಿಯಲ್ಲಿ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದೆ. 
ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತರರಾಷ್ಟ್ರೀಯ ಗಡಿಯ ಅಟ್ಟಾರಿ ಪ್ರಾಂತ್ಯದಲ್ಲಿ ತ್ರಿವರ್ಣ ಧ್ವಜವನ್ನು ಸ್ಥಾಪಿಸಲಾಗಿದ್ದು, ತ್ರಿವರ್ಣ ಧ್ವಜದ ಹಾರಾಟ ಇನ್ನು ಮುಂದೆ ಪಾಕಿಸ್ತಾನದ ಲಾಹೋರ್ ಗೂ ಕಾಣಿಸಲಿದೆ. 
ಧ್ವಜಸ್ತಂಭ 360 ಅಡಿ ಎತ್ತರವನ್ನು ಹೊಂದಿದೆ. ತ್ರಿವರ್ಣ ಧ್ವಜ 120 ಅಡಿ ಉದ್ದ ಮತ್ತು 80 ಅಡಿ ಅಗಲವಾಗಿದೆ. ಧ್ವಜಸ್ತಂಭ 55 ಟನ್ ತೂಕವಿದೆ. ದೇಶದ ಅತೀ ದೊಡ್ಡ ತ್ರಿವರ್ಣದ ಧ್ವಜ ನಿರ್ಮಾಣಕ್ಕೆ ಪಂಜಾಬ್ ಸರ್ಕಾರ ರೂ.3.50 ಕೋಟಿ ವೆಚ್ಚವನ್ನು ಮಾಡಿದೆ. ಧ್ವಜದ ನಿರ್ವಹಣೆ ಹೊಮೆಯನ್ನು ಖಾಸಗಿ ಕಂಪನಿಯೊಂದಕ್ಕೆ ವಹಿಸಿಕೊಡಲಾಗಿದೆ. 
ಗಡಿಯಲ್ಲಿ ಭಾರತ ಬೃಹತ್ ರಾಷ್ಟ್ರಧ್ವಜ ಅನಾವರಣಗೊಳಿಸಿರುವುದಕ್ಕೆ ಪಾಕಿಸ್ತಾನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ಧ್ವಜಸ್ತಂಭವನ್ನು ಭಾರತ ಬೇಹುಗಾರಿಕೆಗಾಗಿ ಬಳಸಿಕೊಳ್ಳುತ್ತಿರಬಹುದು ಎಂದು ಶಂಕಿಸಿದೆ. ಆದರೆ, ಗಡಿರೇಖೆಯಿಂದ 200 ಮೀಟರ್ ಒಳಗಡೆ ರಾಷ್ಟ್ರಧ್ವಜನ್ನು ಪ್ರತಿಷ್ಠಾಪಿಸಲಾಗಿದ್ದು, ಇದರಿಂದ ನಿಯಮಗಳ ಉಲ್ಲಂಘನೆ ಆಗುವುದಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದೆ. 
ತ್ರಿವರ್ಣ ಧ್ವಜ ಲಾಹೋರ್ ಮತ್ತು ಅಟ್ಟಾರಿ ಗಡಿ ನಡುವೆ 24 ಕಿ.ಮೀ ದೂರವಿದೆ. ಇದೀಗ ಅನಾವರಣಗೊಂಡಿರುವ ತ್ರಿವರ್ಣಧ್ವಜಕ್ಕೂ ಮುನ್ನ ಜಾರ್ಖಂಡ್ ನ ರಾಂಚಿಯಲ್ಲಿರುವ 293 ಅಡಿ ಎತ್ತರದ ತ್ರಿವರ್ಣ ಧ್ವಜ ಇದೂರವರೆಗಿನ ಅತೀ ಎತ್ತರದ ರಾಷ್ಟ್ರಧ್ವಜ ಎನಿಸಿಕೊಂಡಿತ್ತು. ಇದೀಗ ಅಟ್ಟಾರಿ ಗಡಿಯಲ್ಲಿ ಪ್ರತಿಷ್ಠಾಪಿಸಿರುವ ತ್ರಿವರ್ಣ ಧ್ವಜ ದೇಶದ ಅತ್ಯಂತ ದೊಡ್ಡ ಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com