ಗೋವಾ ಸರ್ಕಾರ ರಚನೆ: ಬಿಜೆಪಿಗೆ ಮಾ.16 ಕ್ಕೆ ಬಹುಮತ ಸಾಬೀತುಪಡಿಸಲು 'ಸುಪ್ರೀಂ' ಸೂಚನೆ

ಗೋವಾ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತೀವ್ರ ಕುತೂಹಲ ಮೂಡಿಸಿದ್ದ ಸುಪ್ರೀಂ ಕೋರ್ಟ್ ನ ಆದೇಶ ಪ್ರಕಟವಾಗಿದ್ದು, ಸರ್ಕಾರ ರಚನೆಯಾದ ತಕ್ಷಣವೇ ಸದನದಲ್ಲಿ ಬಹುಮತ ಸಬೀತು ಪಡಿಸುವಂತೆ ಸೂಚನೆ
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
Updated on: 
ನವದೆಹಲಿ: ಗೋವಾ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತೀವ್ರ ಕುತೂಹಲ ಮೂಡಿಸಿದ್ದ ಸುಪ್ರೀಂ ಕೋರ್ಟ್ ನ ಆದೇಶ ಪ್ರಕಟವಾಗಿದ್ದು, ಸರ್ಕಾರ ರಚನೆಯಾದ ಮಾ.16 ರಂದು ಸದನದಲ್ಲಿ ಬಹುಮತ ಸಬೀತು ಪಡಿಸುವಂತೆ ಸೂಚನೆ ನೀಡಿದೆ. 
ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸರ್ಕಾರ ರಚನೆಗೆ ತಡೆ ನೀಡುವುದಕ್ಕೆ ನಿರಾಕರಿಸಿದ್ದು, ಸದನದ ಅತಿ ಹಿರಿಯ ಶಾಸಕರು ತತ್ಕಾಲಿಕ ಸಭಾಧ್ಯಕ್ಷರಾಗಬೇಕು ಹಾಗೂ ಮಾ.16 ರಂದು ನಿಯೋಜಿತ ಸಿಎಂ ಮನೋಹರ್ ಪರಿಕ್ಕರ್ ಬಹುಮತ ಸಾಬೀತು ಪಡಿಸಬೇಕೆಂದು ಮಹತ್ವದ ಆದೇಶ ನೀಡಿದೆ. 
ಇನ್ನು ಕಾಂಗ್ರೆಸ್ ಸಹ ಸರ್ಕಾರ ರಚಿಸಲು ಶತ ಪ್ರಯತ್ನ ನಡೆಸುತ್ತಿದ್ದು, ಶಾಸಕಾಂಗ ಪಕ್ಷದ ಸಭೆಯ ನಂತರ ಕಾಂಗ್ರೆಸ್ ನ ಶಾಸಕರು ಮಧ್ಯಾಹ್ನ 1:30 ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಎರಡನೇ ದೊಡ್ಡ ಪಕ್ಷವಾಗಿರುವ  ಬಿಜೆಪಿಗೆ ಸರ್ಕಾರ ರಚಿಸಲು ಮೊದಲು ಅವಕಾಶ ನೀಡಲಾಗಿರುವುದನ್ನು ವಿರೋಧಿಸಿದ್ದ ಕಾಂಗ್ರೆಸ್  ಕಾಂಗ್ರೆಸ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಕಾಂಗ್ರೆಸ್ ಗೆ ಸರ್ಕಾರ ರಚನೆಗೆ ಅವಕಾಶ ನೀಡಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com