ಚಲಿಸುವ ಕಾರಿನಲ್ಲಿ ತಂದೆಯ ಎದುರೇ 2 ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ!

ಚಲಿಸುವ ಕಾರಿನಲ್ಲಿ ತಂದೆಯ ಎದುರೇ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಗುಜರಾತ್ ದಾಹೋದ್ ಜಿಲ್ಲೆಯಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ದಾಹೋದ್: ಚಲಿಸುವ ಕಾರಿನಲ್ಲಿ ತಂದೆಯ ಎದುರೇ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಗುಜರಾತ್ ದಾಹೋದ್ ಜಿಲ್ಲೆಯಲ್ಲಿ ನಡೆದಿದೆ. 
ಬಾಲಕಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ 13 ಆರೋಪಿಗಳ ಪೈಕಿ ಇದೀಗ ಐದು ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಭೂತ್ ಪಾಗ್ಲಾ ಗ್ರಾಮದಲ್ಲಿ ಬಾಲಕಿಯ ತಂದೆ ಅಂಗಡಿಯನ್ನು ನಡೆಸುತ್ತಿದ್ದರು. ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದಿರುವ ಆರೋಪಿಗಳು ಬಾಲಕಿಯರನ್ನು ಸೇರಿ ಬಾಲಕಿಯ ತಂದೆಯನ್ನು ಅಪಹರಣ ಮಾಡಿದ್ದಾರೆ. ಕಾರಿನ್ನು ನಾಲ್ಕು ಮಂದಿ ಎರಡು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ಸಂತ್ರಸ್ತ ಮಕ್ಕಳ ತಂದೆ ಎಫ್ಐಆರ್ ನಲ್ಲಿ ಹೇಳಿಕೊಂಡಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಪಾನ ನಿಷೇದ ಕಾನೂನಿನ ಅಡಿಯಲ್ಲಿ ಸಂತ್ರಸ್ತ ಬಾಲಕಿಯರ ಸಹೋದರ ಬಂಧನಕ್ಕೊಳಗಾಗಿದ್ದ. ವಿಚಾರಣೆ ವೇಳೆ ಕುಮತ್ ಎಂಬಾತನಿಂದ ಮದ್ಯ ಪಡೆಯುತ್ತಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದ. 
ಇದಕ್ಕೆ ತೀವ್ರವಾಗಿ ಕೆಂಡಾಮಂಡಲವಾಗಿದ್ದ ಕುಮತ್ ಬಾಲಕಿಯರ ಸಹೋದರನಿಗೆ ಬೆದರಿಕೆ ಹಾಕಿದ್ದಾನೆ. ಪ್ರತೀಕಾರವಾಗಿ ನಿನ್ನ ಸಹೋದರಿಯರ ಮೇಲೆ ಅತ್ಯಾಚಾರ ಎಸಗುತ್ತೇನೆಂದು ಕುಮತ್ ಹೇಳಿದ್ದ ಎಂದು ಬಾಲಕಿಯರ ಸಹೋದರ ದೂರಿನಲ್ಲಿ ಹೇಳಿಕೊಂಡಿದ್ದಾನೆ.  
ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯರನ್ನು ಮತ್ತು ಅವರ ತಂದೆಯನ್ನು ಆರೋಪಿಗಳು ಮಂದವ್ ಎಂಬ ಗ್ರಾಮದ ಬಳಿ ಇಳಿಸಿದ್ದಾರೆ, ಅಲ್ಲದೆ, ವಿಚಾರವನ್ನು ಎಲ್ಲಿಯೂ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದಾರೆ. ಪ್ರಸ್ತುತ ಬಾಲಕಿಯರು ದೇವ್ಗಡ್ ಬರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com