ನೆಡುತೀವ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಸುಮಾರು 2000 ಮೀನುಗಾರರ ಮೇಲೆ 10 ಬೋಟ್ ಗಳಲ್ಲಿ ಬಂದ ಶ್ರೀಲಂಕಾ ನೌಕಾ ಪಡೆಗಳ ಸಿಬ್ಬಂದಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಮೀನುಗಾರರನ್ನು ಅಟ್ಟಾಡಿಸಿರುವ ಶ್ರೀಲಂಕಾ ನೌಕಾಪಡೆ ಸಿಬ್ಬಂದಿಗಳು ಬಾಟಲಿಗಳು, ಕಲ್ಲುಗಳನ್ನು ಎಸೆಯುವ ಮೂಲಕ ಬೆದರಿಕೆ ಹಾಕಿದ್ದಾರೆಂದು ವರದಿಗಳು ತಿಳಿಸಿವೆ.