ದೇಶ

ಡೆಡ್ ಲೈನ್ ಎಫೆಕ್ಟ್; 246 ಕೋಟಿ "ಹಣ" ಘೋಷಿಸಿದ ತಮಿಳುನಾಡು ವ್ಯಕ್ತಿ, ಶೇ.45ರಷ್ಟು ತೆರಿಗೆ

ಡೆಡ್ ಲೈನ್ ಎಫೆಕ್ಟ್; 246 ಕೋಟಿ "ಹಣ" ಘೋಷಿಸಿದ ತಮಿಳುನಾಡು ವ್ಯಕ್ತಿ, ಶೇ.45ರಷ್ಟು ತೆರಿಗೆ
ಸಂಗ್ರಹ ಚಿತ್ರ
Published On :

ಚೆನ್ನೈ: ತಮಿಳುನಾಡು ಮೂಲದ ವ್ಯಕ್ತಿಯೋರ್ವ ಬರೊಬ್ಬರಿ 246 ಕೋಟಿ ರು.ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಗರೀಭ್ ಕಲ್ಯಾಣ್ ಯೋಜನೆಯ  ಅನ್ವಯ ಈ ಖಾತೆಯಲ್ಲಿನ ಠೇವಣಿಗೆ ಬರೊಬ್ಬರಿ ಶೇ.45ರಷ್ಟು ತೆರಿಗೆ ಹೊರೆ ಬೀಳಲಿದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮಾರ್ಚ್ 31ರ ಅಂತಿಮ ಗಡುವಿನ ಕುರಿತು ದೇಶಾದ್ಯಂತ ಪತ್ರಿಕೆಗಳಲ್ಲಿ ಜಾಹಿರಾತು ನೀಡುವ ಮೂಲಕ ಕಾಳಧನಿಕರಿಗೆ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಹಲವು ಕಾಳಧನಿಕರು ತಮ್ಮ  ತಮ್ಮಲ್ಲಿರುವ ಕಾಳಧನವನ್ನು ಘೋಷಣೆ ಮಾಡುತ್ತಿದ್ದು, ತಮಿಳುನಾಡಿನ ನಾಮಕ್ಕಳ್ ಜಿಲ್ಲೆಯ ತಿರುಚಿನ್ಗೊಡೆ ಗ್ರಾಮದ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಖಾತೆಯಲ್ಲಿ ಸುಮಾರು 246 ಕೋಟಿ ಮೌಲ್ಯದ ಹಳೆಯ ನಿಷೇಧಿತ  ನೋಟುಗಳು ಜಮೆಯಾಗಿದೆ. ನೋಟು ನಿಷೇಧ ಬಳಿಕ ಖಾತೆಗಳಿಗೆ ಜಮೆಯಾಗುವ ಹಣದ ಕುರಿತಂತೆ ಮಾಹಿತಿ ಪಡೆಯುತ್ತಿದ್ದ ಕೇಂದ್ರ ತೆರಿಗೆ ಇಲಾಖೆ ಅಧಿಕಾರಿಗಳು ಈ ವ್ಯಕ್ತಿಯ ಖಾತೆಯನ್ನೂ ಪರಿಶೀಲಿಸಿದ್ದು, ಈ ವೇಳೆ  ಸುಮಾರು 246 ಕೋಟಿ ಹಣ ಕಂಡುಬಂದಿದೆ.

ಹೀಗಾಗಿ ಈ ವ್ಯಕ್ತಿ ವಿರುದ್ಧ ಪ್ರಧಾನ ಮಂತ್ರಿ ಗರೀಭ್ ಕಲ್ಯಾಣ್ ಯೋಜನೆಯ ಅನ್ವಯ ಈ ಖಾತೆಯಲ್ಲಿನ ಠೇವಣಿಗೆ ಬರೊಬ್ಬರಿ ಶೇ.45ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಆರಂಭಿಕ ಹಂತದಲ್ಲಿ ಈ ಯೋಜನೆಗೆ ಸೇರುವುದಾಗಿ  ಹೇಳಿದ್ದ ವ್ಯಕ್ತಿ ಬಳಿಕ ತಲೆಮರೆಸಿಕೊಂಡಿದ್ದ. ಇದೀಗ ಈತನನ್ನು ಹುಡುಕಿರುವ ಅಧಿಕಾರಿಗಳು ಯೋಜನೆ ಅನ್ವಯ ಈತನ ಹಣಕ್ಕೆ ಶೇ.45ರಷ್ಟು ತೆರಿಗೆ ವಿಧಿಸಿದ್ದಾರೆ. ಯೋಜನೆ ಅನ್ವಯ ಹಣದ ಶೇ.25ರಷ್ಟು ಹಣಕ್ಕೆ ಯಾವುದೇ ತೆರಿಗೆ  ಇಲ್ಲವಾದರೂ, ಉಳಿದ ಹಣಕ್ಕೆ ಶೇ.45 ತೆರಿಗೆ ಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ನೋಟು ನಿಷೇಧ ಬಳಿಕ 200ಕ್ಕೂ ಹೆಚ್ಚು ಖಾತೆಗಳಲ್ಲಿ ಸುಮಾರು 600 ಕೋಟಿಗೂ ಅಧಿಕ ಹಣ ಜಮೆಯಾಗಿದ್ದು, ಬಹುತೇಕ ಹಣ ಗ್ರಾಮೀಣ ಭಾಗದಲ್ಲೇ ಜಮೆಯಾಗಿದೆ. ತಿಂಗಳಾಂತ್ಯಕ್ಕೆ ಈ ಪ್ರಮಾಣ ಸಾವಿರ  ಕೋಟಿಯನ್ನೂ ಮೀರಲಿದೆ ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.