ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ಮಹಾಕೌಶಲ್ ಎಕ್ಸ್ ಪ್ರೆಸ್: 36 ಮಂದಿಗೆ ಗಾಯ

ಉತ್ತರ ಪ್ರದೇಶದ ಮಹೋಬ ರೈಲು ನಿಲ್ದಾಣದ ಬಳಿ ಮಹಾಕೌಶಲ್ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದು 12 ಮಂದಿಗೆ ಗಾಯಗಳಾಗಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಾಕೌಶಲ್ ಎಕ್ಸ್ ಪ್ರೆಸ್
ಮಹಾಕೌಶಲ್ ಎಕ್ಸ್ ಪ್ರೆಸ್
Updated on
ಲಖನೌ: ಉತ್ತರ ಪ್ರದೇಶದ ಮಹೋಬ ರೈಲು ನಿಲ್ದಾಣದ ಬಳಿ ಮಹಾಕೌಶಲ್ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದು 12 ಮಂದಿಗೆ ಗಾಯಗಳಾಗಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
8 ಬೋಗಿಗಳು ಹಳಿ ತಪ್ಪಿದ್ದು, ಗಾಯಗೊಂಡ 36 ಜನರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮಧ್ಯರಾತ್ರಿ 2:07 ವೇಳೆಗೆ ಈ ಘಟನೆ ಸಂಭವಿಸಿದ್ದು, ಹಿಂಭಾದಲ್ಲಿದ್ದ ಬೋಗಿಗಳು ಹಳಿ ತಪ್ಪಿವೆ. ಉತ್ತರ ವಿಭಾಗದ ರೈಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 
ಹಳಿ ತಪ್ಪುವುದಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ರೈಲ್ವೆ ಇಲಾಖೆ ಸಹಾಯವಾಣಿಯನ್ನು ಪ್ರಾರಂಭಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com