ಗೋವಾ ಸಿಎಂ ಆಗುವಂತೆ ಮಾಡಿದ ದಿಗ್ವಿಜಯ್ ಸಿಂಗ್'ಗೆ ಧನ್ಯವಾದಗಳು: ಮನೋಹರ್ ಪರಿಕ್ಕರ್

ಗೋವಾದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಗಳನ್ನು ಗೆದ್ದರೂ ಸರ್ಕಾರ ರಚಿಸುವಲ್ಲಿ ವಿಫರಾದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಧನ್ಯವಾದಗಳನ್ನು...
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
Updated on: 
ನವದೆಹಲಿ: ಗೋವಾದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಗಳನ್ನು ಗೆದ್ದರೂ ಸರ್ಕಾರ ರಚಿಸುವಲ್ಲಿ ವಿಫರಾದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಧನ್ಯವಾದಗಳನ್ನು ಹೇಳಿದ್ದಾರೆ. 
ವಿಧಾನಸಭಾ ಚುನಾವಣೆ ಅಂತ್ಯಗೊಂಡ ಬಳಿಕ ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಗೋವಾ ಮುಖ್ಯಮಂತ್ರಿಯಾಗಿ ಪದವಿಯನ್ನು ಅಲಂಕರಿಸಿದ್ದರು. ನಿನ್ನೆ ಶೂನ್ಯ ಅವಧಿಯಲ್ಲಿ ರಾಜ್ಯಸಭೆಗೆ ಭೇಟಿ ನೀಡಿದ ಅವರು, ಅಲ್ಲಿ ನೆರೆದ ಸದಸ್ಯರಿಗೆ ಧನ್ಯವಾದ ಹೇಳಿ, ಯಾವಾಗ ಬೇಕಾದರೂ ಗೋವಾಗೆ ಭೇಟಿ ನೀಡುವಂತೆ ಆಹ್ವಾನಿಸಿದರು. 
ದಿಗ್ವಿಜಯ್ ಸಿಂಗ್ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಹೇಳುತ್ತೇನೆ. ಗೋವಾದಲ್ಲಿ ನಡೆದ ಬೆಳವಣಿಗೆಗಳು ನಮಗೆ ಸರ್ಕಾರ ರಚಿಸಲು ಸಾಧ್ಯವಾಯಿತು. ಸಣ್ಣ ಹಾಗೂ ಸ್ವತಂತ್ರ ಪಕ್ಷಗಳು ನಮಗೆ ಬೆಂಬಲ ನೀಡಿದವು. ಹೀಗಾಗಿ ನಾವು ಗೋವಾದಲ್ಲಿ ಸರ್ಕಾರ ರಚಿಸಲು ಸಾಧ್ಯವಾಯಿತು. ಇದರಲ್ಲಿ ಅನೈತಿಕತೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಇತರೆ ಪಕ್ಷಗಳು ಕಾಂಗ್ರೆಸ್ ನ್ನು ನಂಬದೇ ನಮ್ಮನ್ನು ನಂಬಿ ಬೆಂಬಲವನ್ನುನೀಡಿದೆ. ಇದೊಂದು ಸಮ್ಮಿಶ್ರ ಸರ್ಕಾರವಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com