ಕಾಶ್ಮೀರ ವಿವಾದ ಬಗೆಹರಿಸುವುದರಲ್ಲಿ ಚೀನಾದ ಹಿತಾಸಕ್ತಿ ಅಡಗಿದೆ: ಚೀನಾ ಮಾಧ್ಯಮ

ಪಾಕ್ ಆಕ್ರಮಿತ ಕಾಶ್ಮೀರದಿಂದ ಹಾದು ಹೋಗುವ ಸಿಪಿಇಸಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿದು, ಕಾಶ್ಮೀರ ವಿವಾದ ಬಗೆಹರಿಸುವಲ್ಲಿ ಚೀನಾ ಈಗ ತನ್ನ ಹಿತಾಸಕ್ತಿಯನ್ನು ಹೊಂದಿದೆ...
ಚೀನಾ
ಚೀನಾ
ಬೀಜಿಂಗ್: ಪಾಕ್ ಆಕ್ರಮಿತ ಕಾಶ್ಮೀರದಿಂದ ಹಾದು ಹೋಗುವ ಸಿಪಿಇಸಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿದು, ಕಾಶ್ಮೀರ ವಿವಾದ ಬಗೆಹರಿಸುವಲ್ಲಿ ಚೀನಾ ಈಗ ತನ್ನ ಹಿತಾಸಕ್ತಿಯನ್ನು ಹೊಂದಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ಹೇಳಿದೆ. 
ಕಾಶ್ಮೀರ ವಿವಾದ ಬಗೆಹರಿಸುವ ವಿಷಯದಲ್ಲಿ ಚೀನಾ ತನ್ನ ಹಿತಾಸಕ್ತಿಯನ್ನು ಹೊಂದಿದೆ ಎಂಬ ಅರ್ಥದ ಲೇಖನ ಪ್ರಕಟಿಸುವ ಮೂಲಕ ಚೀನಾ ಕಾಶ್ಮೀರ ಪ್ರದೇಶದ ಮಹತ್ವದ ಪಾತ್ರ ವಹಿಸಲು ಆಸಕ್ತಿ ತೋರುತ್ತಿದೆ ಎಂಬ ಸಂದೇಶ ರವಾನೆ ಮಾಡಿದೆ. "ಚೀನಾ ರೋಹಿಂಗ್ಯಾ ಮುಸ್ಲಿಮರ ವಿಷಯದಲ್ಲಿ ಮಾಯನ್ಮಾರ್- ಬಾಂಗ್ಲಾ ನಡುವೆ ಮಧ್ಯಸ್ಥಿಕೆ ವಹಿಸಿತ್ತು. ಮತ್ತೊಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ತತ್ವವನ್ನು ಪಾಲಿಸುತ್ತಿದೆ. ಅಂದಮಾತ್ರಕ್ಕೆ ಹೊರ ದೇಶಗಳಲ್ಲಿ ಹೂಡಿಕೆ ಮಾಡುತ್ತಿರುವ ಚೀನಾದ ಉದ್ಯಮ ವಲಯದ ಬೇಡಿಕೆಗಳಿಗೆ ಚೀನಾ ಕಿವುಡಾಗಿರಬೇಕು ಎಂಬ ಅರ್ಥವಲ್ಲ. ಸಿಪಿಇಸಿ, ಒನ್ ಬೆಲ್ಟ್ ಒನ್ ರೋಡ್ ನಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡಿರುವ ಚೀನಾ, ಭಾರತ-ಪಾಕಿಸ್ತಾನ ನಡುವೆ ಇರುವ ಕಾಶ್ಮೀರ ವಿವಾವದ ಸೇರಿದಂತೆ ಪ್ರಾದೇಶಿಕ ವಿವಾದಗಳನ್ನು ಬಗೆಹರಿಸುವಲ್ಲಿ ತನ್ನ ಹಿತಾಸಕ್ತಿಯನ್ನು ಹೊಂದಿದೆ ಎಂದು ಗ್ಲೋಬಲ್ ಟೈಮ್ಸ್ ಬರೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com