'ಜಿಸ್ಯಾಟ್-9': ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಸಹಕಾರಕ್ಕೆ ದಾರಿದೀಪ: ಪ್ರಧಾನಿ ಮೋದಿ
ಸ್ಥಳೀಯ ಸಹಕಾರದ ವಿಷಯ ಬಂದಾಗ ಆಕಾಶವು ಮಿತಿಯಾಗಿಲ್ಲ ಎಂಬುದನ್ನು ದಕ್ಷಿಣ ಏಷ್ಯಾ ಜಿಸ್ಯಾಟ್-9 ಉಪಗ್ರಹದ ಉಡಾವಣೆ ಸಾರುತ್ತದೆ. ಸ್ಥಳೀಯ...

Published On :
ನವದೆಹಲಿ: ಸ್ಥಳೀಯ ಸಹಕಾರದ ವಿಷಯ ಬಂದಾಗ ಆಕಾಶವು ಮಿತಿಯಾಗಿಲ್ಲ ಎಂಬುದನ್ನು ದಕ್ಷಿಣ ಏಷ್ಯಾ ಜಿಸ್ಯಾಟ್-9 ಉಪಗ್ರಹದ ಉಡಾವಣೆ ಸಾರುತ್ತದೆ. ಸ್ಥಳೀಯ ಸಹಕಾರದಲ್ಲಿ ಕಾರ್ಯ ಮತ್ತು ಸಹಕಾರಕ್ಕೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್(ಎಲ್ಲಾ ಒಟ್ಟಾಗಿ, ಎಲ್ಲಾ ಅಭಿವೃದ್ಧಿ) ಬೆಳಕು ಮಾರ್ಗದರ್ಶನವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಐತಿಹಾಸಿಕವಾಗಿ ಬಹಳ ಮಹತ್ವದ ದಿನ. ದಕ್ಷಿಣ ಏಷ್ಯಾ ರಾಷ್ಟ್ರಗಳ ಅಭಿವೃದ್ಧಿ ಮತ್ತು ಸಮೃದ್ಧಿಗೆ ಅತ್ಯಾಧುನಿಕ ಅಂತರಿಕ್ಷ ತಂತ್ರಜ್ಞಾನದ ನೆರವನ್ನು ನೀಡುವುದಾಗಿ ಎರಡು ವರ್ಷಗಳ ಹಿಂದೆ ಭಾರತ ಭರವಸೆ ನೀಡಿತ್ತು. ಅದನ್ನು ಇಂದು ಈಡೇರಿಸಿದೆ ಎಂದು ಅವರು ಹೇಳಿದರು.
ಜಿಸ್ಯಾಟ್-9ರ ಸ್ಥಾನ ಆಕಾಶದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿರುವುದರಿಂದ ಆರ್ಥಿಕ ಬೆಳವಣಿಗೆಯ ಅಭಿವೃದ್ಧಿ ಹೊಂದಲು ನೆರವಾಗುತ್ತದೆ. ಸರ್ಕಾರದಿಂದ ಇದಕ್ಕೆ ಸಾಕಷ್ಟು ಆರ್ಥಿಕ ನೆರವು ಸಿಕ್ಕಿದೆ. ಇಲ್ಲದಿದ್ದರೆ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಈ ಉಪಗ್ರಹದ ಮೂಲಕ ನಮ್ಮ ನೆರೆಯ ದೇಶಗಳ ಜೊತೆ ನಾವು ಸಹಕಾರದಿಂದ ಇರುತ್ತೇವೆಯೇ ಹೊರತು ಸಂಘರ್ಷ ಬಯಸುವುದಿಲ್ಲ. ಅಭಿವೃದ್ಧಿ ಹೊರತು ನಾಶವಲ್ಲ ಮತ್ತು ಸಮೃದ್ಧಿ ಬಯಸುತ್ತೇವೆಯೇ ಹೊರತು ಬಡತನವಲ್ಲ ಎಂಬ ಸಂದೇಶವನ್ನು ಸಾರುತ್ತದೆ ಎಂದರು.
ಜಿಸ್ಯಾಟ್-9 ಉಪಗ್ರಹದಿಂದ ನಾವು ಪರಿಣಾಮಕಾರಿ ಸಂವಹನ, ಉತ್ತಮ ಸರ್ಕಾರ, ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ದೂರದ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣವನ್ನು ಗಳಿಸಲು ಸಾಧ್ಯ ಎಂದು ಪ್ರಧಾನಿ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಕಡ್ಡಾಯ ಪ್ರಾದೇಶಿಕ ಸಹಕಾರ ಇಂದು ವಾಸ್ತವವಾಗಿ ಬದಲಾಗಿದೆ. ಮಾತು ಮತ್ತು ಕೃತಿಗಳ ನಡುವಿನ ಅಂತರಕ್ಕೆ ಇಂದು ಸೇತುವೆ ನಿರ್ಮಿಸಿದ್ದೇವೆ ಎಂದು ಹೇಳಿದರು.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಉಪಗ್ರಹದ ಯಶಸ್ವಿ ಉಡಾವಣೆಗೆ ಅಭಿನಂದನೆ ಸಲ್ಲಿಸಿ ಈ ಉಪಗ್ರಹದ ಯಶಸ್ವಿ ಉಡಾವಣೆ ಮೂಲಕ ದಕ್ಷಿಣ ಏಷ್ಯಾ ದೇಶಗಳ ಘನತೆ ಹೆಚ್ಚಾಗಲಿದೆ ಎಂದರು.
ಭೂತಾನ್ ಪ್ರಧಾನಿ ತ್ಹೆರಿಂಗ್ ಟೊಬ್ಗೆ ಮಾತನಾಡಿ, ವಿಶ್ವದ ಇತಿಹಾಸದಲ್ಲಿ ಇದು ಪ್ರಭಾವಶಾಲಿ ಮೈಲಿಗಲ್ಲು. ನೆರೆ ದೇಶಗಳ ಉತ್ತಮ ಭವಿಷ್ಯಕ್ಕೆ ಉಪಗ್ರಹವನ್ನು ಸಮರ್ಪಿಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು ಎಂದರು.
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಪ್ರಧಾನಿ ಮೋದಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೇಳಿಕೆಯನ್ನು ಉಲ್ಲೇಖಿಸಿದರು. ತಮ್ಮ ಕನಸು, ಆಸೆಗಳನ್ನು ಈಡೇರಿಸಲು ಸದಸ್ಯ ರಾಷ್ಟ್ರಗಳು ಉಪಗ್ರಹದ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್, ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂಪರ್ಕ ಇದರಿಂದ ಹೆಚ್ಚಾಗುತ್ತದೆ. ಅಭಿವೃದ್ಧಿಗೆ ಸಂಪರ್ಕ ಅತಿ ಮುಖ್ಯ ಎಂದರು.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಸಾರ್ಕ್ ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


