ನಿಷೇಧಿತ ಪಾಕ್, ಸೌದಿ ವಾಹಿನಿಗಳ ಪ್ರಸಾರವನ್ನು ನಿಲ್ಲಿಸಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿಗಳ ನಿವಾಸಗಳಲ್ಲಿ ನಿಷೇಧಿತ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ವಾಹಿನಿಗಳನ್ನು ಅಕ್ರಮವಾಗಿ ಪ್ರಸಾರ ಮಾಡಲಾಗುತ್ತಿದ್ದು, ಕೂಡಲೇ ನಿಷೇಧಿತ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳಿಸುವಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿಗಳ ನಿವಾಸಗಳಲ್ಲಿ ನಿಷೇಧಿತ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ವಾಹಿನಿಗಳನ್ನು ಅಕ್ರಮವಾಗಿ ಪ್ರಸಾರ ಮಾಡಲಾಗುತ್ತಿದ್ದು, ಕೂಡಲೇ ನಿಷೇಧಿತ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹಿಸಿದೆ. 
ಈ ಕುರಿತಂತೆ ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ ಅವರು, ಕಾಶ್ಮೀರಿಗರ ಮನೆಗಳಲ್ಲಿ ನಿಷೇಧಿತ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ದೇಶಗಳ ವಾಹಿನಿಗಳು ಅಕ್ರಮವಾಗಿ ಪ್ರಸಾರ ಮಾಡಲಾಗುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಈ ರೀತಿಯ ಸಂದರ್ಭದಲ್ಲಿ ಇಂತಹ ನಿಷೇಧಿತ ವಾಹಿನಗಳನ್ನು ಪ್ರಸಾರ ಮಾಡುವುದು ನಿಜಕ್ಕೂ ಅಪಾಯಕಾರಿಯಾಗಿದೆ. ಈ ಕುರಿತ ವಿಚಾರ ಕೇಂದ್ರ ಸರ್ಕಾರಕ್ಕೆ ತಿಳಿದಿದೆ ಎಂದು ನನಗನ್ನಿಸುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ವಾಹಿನಿಗಳ ಪ್ರಸಾರವನ್ನು ಕೂಡಲೇ ಸ್ಥಗಿತಗೊಳಿಸಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಇನ್ನು ಕಾಶ್ಮೀರದಲ್ಲಿ ನಡೆಸುತ್ತಿರುವ ಈ ರೀತಿಯ ಬೆಳವಣಿಗೆಗೆ ಸಿಪಿಐ ಕೂಡ ಖಂಡನೆ ವ್ಯಕ್ತಪಡಿಸಿದ್ದು, ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿ ಮಾಧ್ಯಮಗಳು ತಲೆಹಾಕಬಾರದು ಎಂದು ಹೇಳಿದೆ. 
ಸಿಪಿಐ ನಾಯಕ ಡಿ. ರಾಜಾ ಅವರು ಈ ಕುರಿತಂತೆ ಮಾತನಾಡಿದ್ದು, ಇಂತಹ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿ ಮಾಧ್ಯಮಗಳು ತಲೆಹಾಕಬಾರದು. ಇದು ನಿಜಕ್ಕೂ ಖಂಡನೀಯ. ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಪ್ರಸಾರಗಳನ್ನು ಖಂಡಿಸುತ್ತೇವೆಂದು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಮತಿ ಇಲ್ಲದೆಯೇ ಖಾಸಗಿ ಕೇಬಲ್ ನೆಟ್ ವರ್ಕ್ ಗಳು ನಿಷೇಧಿತ ಜಾಕೀರ್ ನಾಯಕ್ ಅವರ ಪೀಸ್ ಟಿವಿ ಸೇರಿದಂತೆ 50ಕ್ಕೂ ಹೆಚ್ಚು ಸೌದಿ ಹಾಗೂ ಪಾಕಿಸ್ತಾನ ವಾಹಿನಿಗಳು ಪ್ರಸಾರ ಮಾಡುತ್ತಿವೆ ಎಂದು ಇತ್ತೀಚೆಗಷ್ಟೇ ವರದಿಗಳು ತಿಳಿಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com