ಕಾಶ್ಮೀರಿ ಯುವ ಸೇನಾಧಿಕಾರಿ ಹತ್ಯೆಯ ಹಿಂದೆ ಹಿಜ್ಬುಲ್ ಕೈವಾಡ; ಪೊಲೀಸರ ಶಂಕೆ

Published On :
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಕಾಶ್ಮೀರದ ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಅಪಹರಿಸಿ, ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಗುರುವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಫಯಾಜ್ ಅವರನ್ನು ಪೊಲೀಸರಿಂದ ಕದ್ದಿದ್ದ ಐಎನ್ಎಸ್ಎಎಸ್ ರೈಫಲ್ ನಿಂದ ಹತ್ಯೆ ಮಾಡಲಾಗಿದೆ. ಅವರ ದೇಹದ ಮೇಲೆ ಕಿರುಕುಳ ನೀಡಿದ ಯಾವುದೇ ಗಾಯಗಳಿಲ್ಲ. ಆದರೆ ಹತ್ಯೆಯ ರೀತಿಯನ್ನು ಗಮನಿಸಿದರೆ ಇದು ಹಿಜ್ಬುಲ್ ಉಗ್ರರ ಕೃತ್ಯ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾವು ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿದ್ದು, ಇದು ಶೋಪಿಯಾನ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಕೃತ್ಯ ಎಂದು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಎಸ್ ಜೆ ಎಂ ಗಿಲಾನಿ ಅವರು ಹೇಳಿದ್ದಾರೆ.
ನಾವು ಈಗ ಫಯಾಜ್ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಆದರೆ ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಅವರ ದೇಹವನ್ನು ಪರಿಶೀಲಿದ್ದು, ದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ಮಂಗಳವಾರ ಶೋಪಿಯಾನ್ ಜಿಲ್ಲೆಯಲ್ಲಿ ಸಂಬಂಧಿಕರೊಬ್ಬರ ಮದುವೆಗೆಂದು ಉಮರ್ ಫಯಾಜ್ ಹೋಗಿದ್ದರು. ಈ ವೇಳೆ ಮದುವೆ ಮನೆಗೆ ನುಗ್ಗಿರುವ ಶಸ್ತ್ರಾಸ್ತ್ರಧಾರಿ ಉಗ್ರರ ಗುಂಪೊಂದು ಬೆದರಿಸಿ ಫಯಾಜ್ ಅವರನ್ನು ಅಪಹರಿಸಿತ್ತು. ಬಳಕಿ ಫಯಾಜ್ ಅವರ ಮೃತದೇಹ ಬಸ್ ನಿಲ್ದಾಣವೊಂದರಲ್ಲಿ ಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


