ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಕದನ ಉಲ್ಲಂಘನೆ ಮಾಡುತ್ತಿದ್ದು, ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಅರ್ನಿಯಾ ಸೆಕ್ಟರ್ ಬಳಿಯಿರುವ ಬೇಲಿ ಬಳಿ ಸೇನೆ ಟ್ರಾಕ್ಟರ್ ನಲ್ಲಿ ಕೆಲಸವನ್ನು ಮಾಡುತ್ತಿತ್ತು. ಈ ವೇಳೆ ಪಾಕಿಸ್ತಾನ ಭಾರತೀಯ ಸೇನೆ ಮೇಲೆ ಗುಂಡುಗಳನ್ನು ಹಾರಿಸಿತು. ಪಾಕಿಸ್ತಾನ ಸೈನಿಕರ ಗುಂಡಿನ ದಾಳಿಕೆ ಭಾರತೀಯ ಸೇನೆ ಕೂಡ ಪ್ರತಿ ಗುಂಡು ಹಾರಿಸುವ ಮೂಲಕ ದಿಟ್ಟ ಉತ್ತರವನ್ನು ನೀಡಿದೆ ಎಂದು ಗಡಿ ಭದ್ರತಾ ಪಡೆ ಹೇಳಿದೆ.
ಇದಲ್ಲದೆ, ಗಡಿಯಲ್ಲಿ ಶೆಲ್ ಗಳ ದಾಳಿ ಕೂಡ ಮಾಡಲಾಗಿದ್ದು, ದಾಳಿಯಲ್ಲಿ ಓರ್ವ ಯೋಧನಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.