'ಡ್ಯಾಡಿ ಪ್ಲೀಸ್ ನನ್ನನ್ನು ಬದುಕಿಸಿ': ಚಿಕಿತ್ಸೆಗೆ ನೆರವಾಗುವಂತೆ ತಂದೆ ಬಳಿ ಕ್ಯಾನ್ಸರ್ ಪೀಡಿತ ಬಾಲಕಿ ಮನವಿ

ಡ್ಯಾಡಿ ಪ್ಲೀಸ್ ನನ್ನನ್ನು ಬದುಕಿಸಿ...ಪ್ಲೀಸ್ ನನಗೆ ಚಿಕಿತ್ಸೆ ಕೊಡಿಸ.,.. ನಾನು ಬದುಕಬೇಕು...ಇದು ಕ್ಯಾನ್ಸರ್ ಪೀಡಿತ ಬಾಲಕಿಯೊಬ್ಬಳು ಕರುಳು ಹಿಂಡುವ ರೀತಿಯಲ್ಲಿ ತನ್ನ ತಂದೆ ಬಳಿ ಮಾಡುತ್ತಿರುವ ಮನವಿ ಮಾತುಗಳು...
ಕ್ಯಾನ್ಸರ್ ಪೀಡಿತ ಬಾಲಕಿ ಸಾಯಿ ಶ್ರೀ
ಕ್ಯಾನ್ಸರ್ ಪೀಡಿತ ಬಾಲಕಿ ಸಾಯಿ ಶ್ರೀ
ವಿಜಯವಾಡ: ಡ್ಯಾಡಿ ಪ್ಲೀಸ್ ನನ್ನನ್ನು ಬದುಕಿಸಿ...ಪ್ಲೀಸ್ ನನಗೆ ಚಿಕಿತ್ಸೆ ಕೊಡಿಸಿ,.. ನಾನು ಬದುಕಬೇಕು...ಇದು ಕ್ಯಾನ್ಸರ್ ಪೀಡಿತ ಬಾಲಕಿಯೊಬ್ಬಳು ಕರುಳು ಹಿಂಡುವ ರೀತಿಯಲ್ಲಿ ತನ್ನ ತಂದೆ ಬಳಿ ಮಾಡುತ್ತಿರುವ ಮನವಿಯ ಮಾತುಗಳು...
13 ವರ್ಷದ ಸಾಯಿ ಶ್ರೀ ಎಂಬ ಬಾಲಕಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಕೊಡಿಸುವಂತೆ ತನ್ನನ್ನು ಬಿಟ್ಟು ಹೋದ ತಂದೆ ಬಳಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಕ್ಯಾನ್ಸರ್ ವಿರುದ್ಧ ತೀವ್ರ ಹೋರಾಟ ಮಾಡುತ್ತಿದ್ದ ಸಾಯಿಶ್ರೀ ಸೂಕ್ತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದ ಕಾರಣ ಇದೇ ತಿಂಗಳ 14 ರಂದು ಸಾವಿಗೀಡಾಗಿದ್ದಾಳೆ. ತನಗೆ ಕ್ಯಾನ್ಸರ್ ಇದ್ದು, ಚಿಕಿತ್ಸೆ ಕೊಡಿಸುವಂತೆ ವಿಡಿಯೋ ಮೂಲಕ ತಂದೆ ಬಳಿ ಮನವಿ ಮಾಡಿಕೊಂಡಿದ್ದಾಳೆ. ಆದರೆ, ಬಾಲಕಿಯ ತಂದೆ ಮಾತ್ರ ಮಗಳ ಮನವಿಗೆ ಸ್ಪಂದಿಸಿಲ್ಲ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮನಕಲಕುವಂತೆ ಮಾಡುತ್ತಿದೆ. 
ಸಾಯಿ ಶ್ರೀ ತಂದೆ ಮತ್ತು ತಾಯಿ ಇಬ್ಬರೂ ಬೇರೆಬೇರೆಯಾಗಿ ವಾಸಿಸುತ್ತಿದ್ದಾರೆ. ತಂದೆಯಾದವನು ತನ್ನ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆಲ್ಲೋ ಬದುಕುತ್ತಿದ್ದಾರೆ. 
13 ವರ್ಷದ ಸಾಯಿ ಶ್ರೀ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಚಿಕಿತ್ಸೆ ಕೊಡಿಸುವ ಶಕ್ತಿ ತಾಯಿಗಿರಲಿಲ್ಲ. ಹೀಗಾಗಿ ಹತ್ತು ದಿನಗಳ ಹಿಂದೆ ತನ್ನ ಚಿಕಿತ್ಸೆಗೆ ನೆರವಾಗುವಂತೆ ಬಾಲಕಿ ತಂದೆಗೆ ವಿಡಿಯೋ ಮೂಲಕ ಮನವಿ ಮಾಡಿದ್ದಳು. ಈ ವಿಡಿಯೋವನ್ನು ವಾಟ್ಸ್ ಅಪ್ ಮೂಲಕ ತಂದೆಗೆ ಕಳುಹಿಸಲಾಗಿತ್ತು. 
ಅಪ್ಪ ನಿನ್ನ ಬಳಿ ಹಣ ಇಲ್ಲ ಎಂದು ಹೇಳುತ್ತೀದ್ದೀಯಲ್ಲಾ... ಕನಿಷ್ಟ ನನ್ನ ಮನೆ ಇದೆಯಲ್ಲಾ. ಅದನ್ನು ಮಾರಿಯಾದರೂ ಬಂದ ಹಣದಲ್ಲಿ ನನಗೆ ಚಿಕಿತ್ಸೆ ಕೊಡಿಸು. ಚಿಕಿತ್ಸೆ ಕೊಡದಿದ್ದರೆ ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪ್ಲೀಸ್ ನನ್ನನ್ನು ಬದುಕಿಸು ಡ್ಯಾಡಿ. ನನ್ನ ಸ್ನೇಹಿತರ ಜೊತೆ ಆಟವಾಡಬೇಕೆಂದು ಅನಿಸುತ್ತಿದೆ. ಶಾಲಗೆ ಹೋಗಬೇಕೆನ್ನಿಸುತ್ತಿದೆ. ಅಮ್ಮನ ಬಳಿ ಹಣವಿಲ್ಲ. ಚಿಕಿತ್ಸೆಗೆ ಹಣ ನೀನೇ ಕೊಡು. ದಯವಿಟ್ಟು ಈ ವಿಡಿಯೋ ನೋಡಿದ 3 ದಿನಗಳಲ್ಲಿ ಪ್ರತಿಕ್ರಿಯೆ ನೀಡಿ. ನನ್ನ ಮೇಲೆ ದಯೆತೋರಿ...ಪ್ಲೀಸ್ ಡ್ಯಾಡಿ...ಎಂದು ಸಾಯಿ ಶ್ರೀ ವಿಡಿಯೋದಲ್ಲಿ ಗೋಗರೆದಿದ್ದಾಳೆ. 
ಬಾಲಕಿ ಇಷ್ಟೆಲ್ಲಾ ಬೇಡಿಕೊಂಡಿದ್ದರೂ, ಆಕೆಯ ತಂದೆ ಮಾತ್ರ ಇದಕ್ಕೆ ಯಾವುದ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಬಾಲಕಿ ಕೊನೆಯುಸಿರೆಳೆದಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com