ಲಖನೌ: ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‍ಎಸ್‍ಎಸ್) ಇಲ್ಲದೇ ಹೋಗಿದ್ದರೆ ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಪಾಕಿಸ್ತಾನದ ಪಾಲಾಗುತ್ತಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಆರ್‍ಎಸ್‍ಎಸ್ ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಹೀಗಾಗಿ ಈ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಆರ್‍ಎಸ್‍ಎಸ್ ಯಾವತ್ತೂ ಸರ್ಕಾರದಿಂದ ಸಹಾಯವನ್ನು ಪಡೆದಿಲ್ಲ. ಕೆಲವರು ರಾಷ್ಟ್ರಗೀತೆಯನ್ನು ಕೋಮುವಾದದೊಂದಿಗೆ ತಲುಕು ಹಾಕುತ್ತಿದ್ದಾರೆ ಎಂದರು.
ಒಂದು ವೇಳೆ ಆರ್‍ಎಸ್‍ಎಸ್ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ(ಜನ ಸಂಘದ ಸಂಸ್ಥಾಪಕರು) ಇಲ್ಲದೇ ಇರುತ್ತಿದ್ದರೆ ಶಾಲೆಯಲ್ಲಿ ವಂದೇ ಮಾತರಂ ಹಾಡುವುದನ್ನು ಜನರು ಮರೆತು ಬಿಡುತ್ತಿದ್ದರು. ಆರ್‍ಎಸ್‍ಎಸ್ ಸುಮಾರು 64 ಸಾವಿರಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ ಎಂದು ಆದಿತ್ಯನಾಥ ಹೇಳಿದ್ದಾರೆ.
ಆದಿತ್ಯನಾಥ ಸರ್ಕಾರ ಗಾಯ್, ಗಂಗಾ ಮತ್ತು ಗೋ ರಕ್ಷಾ ಈ ಮೂರು ವಿಷಯಗಳ ಬಗ್ಗೆ ಮಾತ್ರ ಸರ್ಕಾರ ಗಮನ ಹರಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.