ನವದೆಹಲಿ: ಹಿರಿಯ ಅಧಿಕಾರಿ ಅನುರಾಗ್ ತ್ರಿಪಾಠಿ ಅವರನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ನೂತನ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ.
1998ನೇ ಬ್ಯಾಚ್ ನ ಐಆರ್ ಪಿಎಸ್ (ಭಾರತೀಯ ರೈಲ್ವೆ ಸಿಬ್ಬಂದಿ ಸೇವೆ) ಅಧಿಕಾರಿಯಾಗಿರುವ ತ್ರಿಪಾಠಿ ಅವರನ್ನು ಐದು ವರ್ಷಗಳ ಅವಧಿಗಾಗಿ ಸಿಬಿಎಸ್ ಇ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ.