ಅನಗತ್ಯ ದೈಹಿಕ ಸಂಪರ್ಕಗಳೆಲ್ಲವೂ ಲೈಂಗಿಕ ದೌರ್ಜನ್ಯವಾಗುವುದಿಲ್ಲ: ದೆಹಲಿ ಹೈ ಕೋರ್ಟ್!

ಅನಗತ್ಯ ಮತ್ತು ಅನಿರೀಕ್ಷಿತ ದೈಹಿಕ ಸಂಪರ್ಕಗಳೆಲ್ಲವೂ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಅನಗತ್ಯ ದೈಹಿಕ ಸಂಪರ್ಕಗಳೆಲ್ಲವೂ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಆರ್‌ಆರ್‌ಐ) ಇದರ ಮಹಿಳಾ ವಿಜ್ಞಾನಿಯೊಬ್ಬರು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅವರ ಮಾಜಿ ಸಹೋದ್ಯೋಗಿಗೆ ಸಂಸ್ಥೆಯ ಆಂತರಿಕ ಶಿಸ್ತು ಸಮಿತಿ ಕ್ಲೀನ್ ಚಿಟ್  ನೀಡಿರುವುದನ್ನು ಎತ್ತಿ ಹಿಡಿದ ಹೈಕೋರ್ಟ್ ಒಂದು ದೈಹಿಕ ಸಂಪರ್ಕವನ್ನು ಲೈಂಗಿಕ ಸ್ವರೂಪದ್ದು ಎಂದು ಹೇಳುವಾಗ ಒಂದು ನಿರ್ದಿಷ್ಟ ಸನ್ನಿವೇಶವಿರಬೇಕು ಎಂದು ಹೇಳಿದೆ. "ಕೇವಲ ಒಂದು ಆಕಸ್ಮಿಕವಾದ ದೈಹಿಕ ಸಂಪರ್ಕ  ಅಸ್ವಾಗಾತಾರ್ಹವಾಗಿದ್ದರೂ ಅದು ಲೈಂಗಿಕ ಕಿರುಕುಳವಾಗಲು ಸಾಧ್ಯವಿಲ್ಲ. ಅಂತೆಯೇ ಯಾವುದೇ ಲೈಂಗಿಕ ಸ್ವರೂಪದ್ದಲ್ಲದ ದೈಹಿಕ ಸಂಪರ್ಕ ಕೂಡ ಲೈಂಗಿಕ ಕಿರುಕುಳವಾಗದು’" ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ  ವಿಭು ಬಖ್ರು ಹೇಳಿದ್ದಾರೆ.

ಆರ್ ಆರ್ ಐ ವಿಜ್ಞಾನಿಯೊಬ್ಬರ ವಿರುದ್ಧ ಅದೇ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರು ಸಲ್ಲಿಕೆ ಮಾಡಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿದ್ದು, ದೂರುದಾರೆ ಎಪ್ರಿಲ್  2005ರ ಒಂದು ಘಟನೆಯನ್ನು ಉಲ್ಲೇಖಿಸಿದ್ದರಲ್ಲದೆ ಆರೋಪಿ ತಾನು ಕೆಲಸ ಮಾಡುತ್ತಿದ್ದ ಪ್ರಯೋಗಾಲಯವನ್ನು ಪ್ರವೇಶಿಸಿ ತನ್ನ ಕೈ ಹಿಡಿದು ಕೈಯ್ಯಲ್ಲಿದ್ದ ಸ್ಯಾಂಪಲ್ ಗಳನ್ನು ಎಸೆದು ಕೊಠಡಿಯಿಂದ ಹೊರ ಹಾಕಿದ್ದರು ಎಂದು  ದೂರಲಾಗಿತ್ತು. ಅಂತೆಯೇ ಇದೊಂದು ಅಸ್ವಾಗಾತಾರ್ಹ ದೈಹಿಕ ಸಂಪರ್ಕವಾಗಿದ್ದು ಹಾಗೂ ಲೈಂಗಿಕ ಕಿರುಕುಳಕ್ಕೆ ಸಮ’’ ದೂರುದಾರೆ ಆರೋಪಿಸಿದ್ದರು.

ಆದರೆ ಸಂಸ್ಥೆಯ ಆಂತರಿಕ ದೂರು ಸಮಿತಿ ಪ್ರಕರಣದ ತನಿಖೆ ನಡೆಸಿ ಇದು ಜಗಳದಿಂದ ಉಂಟಾದ ಘಟನೆ ಹಾಗೂ ಘಟನೆಯಲ್ಲಿ ಹೊಂದಾಣಿಕೆಯಿಲ್ಲದ ವಾತಾವಾರಣದಿಂದಾಗಿ ಈ ಘಟನೆ ನಡೆದಿದ್ದು, ಲೈಂಗಿಕ ದೌರ್ಜನ್ಯದ  ಆರೋಪ ಸಾಬೀತಾಗಿಲ್ಲ ಎಂದು ಈ ಹಿಂದೆ ಶಿಸ್ತು ಸಮಿತಿ ವಿಜ್ಞಾನಿಗೆ ಕ್ಲೀನ್ ಚಿಟ್ ನೀಡಿತ್ತು. ಇದೀಗೆ ದೆಹಲಿ ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com