ಪಾಕಿಸ್ತಾನವನ್ನು ಬಿಡಿ, ಆಂತರಿಕವಾಗಿಯೇ ಹೋರಾಡಬೇಕಾಗುತ್ತದೆ: ರಾಜ್ ಠಾಕ್ರೆ

ಬೆಹ್ರಾಂಪಾಡಾದ ಸ್ಲಂ ನಲ್ಲಿರುವವರು ಬಾಂಗ್ಲಾದ ಅಕ್ರಮ ವಲಸಿಗರಾಗಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಾಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ರಾಜ್ ಠಾಕ್ರೆ
ರಾಜ್ ಠಾಕ್ರೆ
Updated on: 
ಮುಂಬೈ: ಬೆಹ್ರಾಂಪಾಡಾದ ಸ್ಲಂ ನಲ್ಲಿರುವವರು ಬಾಂಗ್ಲಾದ ಅಕ್ರಮ ವಲಸಿಗರಾಗಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಾಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. 
ಬಾಂಗ್ಲಾ ವಲಸಿಗರಿಗೆ ಸುಲಭವಾಗಿ ಆಧಾರ್ ಕಾರ್ಡ್ ಸಿಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಭಾರತ ಪಾಕಿಸ್ತಾನದೊಂದಿಗೆ ಹೋರಾಟ ಮಾಡುವ ಬದಲು ಆಂತರಿಕವಾಗಿಯೇ ಹೋರಾಟ ಎದುರಿಸಬೇಕಾಗುತ್ತದೆ ಎಂದು ರಾಜ್ ಠಾಕ್ರೆ ಎಚ್ಚರಿಸಿದ್ದಾರೆ. 
ಈ ರೀತಿ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿರುವವರು ಎಲ್ಲಿಂದ ಬಂದಿದ್ದಾರೆ ಎಂಬ ಬಗ್ಗೆ ಯಾವುದೇ ದಾಖಲೆಗಳಲಿಲ್ಲ. ಅ.26 ರಂದು ಬೆಹ್ರಾಂಪಾಡಾದಲ್ಲಿ ಉಂಟಾಗಿದ್ದ ಅಗ್ನಿ ಅವಗಢ ಆಕಸ್ಮಿಕವಲ್ಲ, ಅದನ್ನು ಯೋಜಿಸಿಯೇ ಮಾಡಿದ್ದಾರೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com