ಮುಂಬೈ: ಮೊನೊರೈಲಿನಲ್ಲಿ ಸಣ್ಣ ಅಗ್ನಿ ಅವಘಡ

ವಡಲಾ ರೈಲು ನಿಲ್ದಾಣದ ಸಮೀಪ ಮೊನೊರೈಲಿನ ಹಿಂಬದಿ ಬೋಗಿಯಲ್ಲಿ ಇಂದು ...
ಬೆಂಕಿಯಲ್ಲಿ ಸುಟ್ಟ ಬೋಗಿ
ಬೆಂಕಿಯಲ್ಲಿ ಸುಟ್ಟ ಬೋಗಿ
ಮುಂಬೈ: ವಡಲಾ ರೈಲು ನಿಲ್ದಾಣದ ಸಮೀಪ ಮೊನೊರೈಲಿನ ಹಿಂಬದಿ ಬೋಗಿಯಲ್ಲಿ ಇಂದು ಬೆಳಗ್ಗೆ ಸಣ್ಣ ಅಗ್ನಿ ಅವಘಡವೊಂದು ಸಂಭವಿಸಿದೆ. ಇದರಿಂದಾಗಿ ಎಲ್ಲಾ ಮೊನೊರೈಲಿನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. 
ಇಂದು ಬೆಳಕಿನ ಜಾವ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿತ್ಯದ ಸಂಚಾರ ಆರಂಭಿಸಿದ್ದ ಮೊನೊರೈಲಿನಲ್ಲಿ ಈ ಅವಘಡವುಂಟಾಗಿದೆ. 
ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಆದರೂ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿ ಉರಿದಿರಬಹುದೆಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
----------------------------------------

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com