ಜಿಎಸ್ ಟಿ ಎಂದರೇನು ಅರ್ಥಮಾಡಿಕೊಳ್ಳಲು ಇನ್ನೂ ಆಗಿಲ್ಲ: ಮಧ್ಯಪ್ರದೇಶ ಸಚಿವ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯನ್ನು ವಿರೋಧಪಕ್ಷಗಳು ವಿರೋಧಿಸುತ್ತಿರುವಾಗಲೇ ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಓಂ ಪ್ರಕಾಶ್ ಧೂರ್ವೆ ಜಿಎಸ್ ಟಿ ಎಂದರೇನು...
ಜಿಎಸ್ ಟಿ
ಜಿಎಸ್ ಟಿ
Updated on: 
ಭೋಪಾಲ್: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯನ್ನು ವಿರೋಧಪಕ್ಷಗಳು ವಿರೋಧಿಸುತ್ತಿರುವಾಗಲೇ ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಓಂ ಪ್ರಕಾಶ್ ಧೂರ್ವೆ ಜಿಎಸ್ ಟಿ ಎಂದರೇನು ಎಂಬುದು ತಮಗೆ ಇನ್ನೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ. 
ನ.10 ರಂದು ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಇದಕ್ಕೂ ಮುನ್ನ ನಡೆದ ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ಕುರಿತ ಚರ್ಚೆಯಲ್ಲಿ ಧೂರ್ವೆ ಈ ಮಾತನ್ನು ಹೇಳಿದ್ದು, ಜಿಎಸ್ ಟಿ ಅಂದರೇನು ಅಂತ ನನಗೆ ಇನ್ನೂ ಅರ್ಥವಾಗಿಲ್ಲ, ಆದ್ದರಿಂದ ಈ ವಿಷಯದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಎಂದಿದ್ದಾರೆ.
ಸಿಎ, ಉದ್ಯಮಿಗಳಿಗೂ ಸಹ ಜಿಎಸ್ ಟಿ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದು ಧೂರ್ವೆ ಹೇಳಿದ್ದು, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗಲೇ ನನಗೆ ಸಮಾಧಾನವಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com