ದೆಹಲಿ ಸರ್ಕಾರದ ಸಮ-ಬೆಸ ಸಂಚಾರ ನೀತಿಗೆ ರಾಷ್ಟ್ರೀಯ ಹಸಿರು ಪೀಠ ಶುಕ್ರವಾರ ತೀವ್ರ ಆಕ್ಷೇಪ ವ್ಯಕಪಡಿಸಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಹಲವು ಪರಿಣಾಮಕಾರಿ ಕ್ರಮಗಳಿದ್ದರೂ, ಪ್ರತಿ ಬಾರಿ ಸಮ-ಬೆಸ ಕ್ರಮವನ್ನು ಮಾತ್ರ ಆಯ್ದುಕೊಳ್ಳುತ್ತಿದ್ದೀರಿ. ಅದರ ಹೊರತಾಗಿ ಇತರೆ ಕ್ರಮಗಳ ಜಾರಿಗೆ ಸರ್ಕಾರ ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಎನ್ ಜಿಟಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.