ಸೈಬರ್ ಭದ್ರತೆಗೆ ಕೈ ಜೋಡಿಸಲು ಭಾರತ, ಚೀನಾ ಮತ್ತು ಅಮೆರಿಕಾ ನಿರ್ಧಾರ

ಸೈಬರ್ ನ್ನು ಸುರಕ್ಷಿತವಾಗಿ ಬಳಸಲು ಅಮೆರಿಕಾ, ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡಲು ...
ದೆಹಲಿಯಲ್ಲಿ ನಡೆದ ಸಭೆ
ದೆಹಲಿಯಲ್ಲಿ ನಡೆದ ಸಭೆ
ನವದೆಹಲಿ: ಸೈಬರ್ ಭದ್ರತೆಗೆ ಅಮೆರಿಕಾ, ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿವೆ.
ದೆಹಲಿಯ ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್ ನಲ್ಲಿ ನಿನ್ನೆ ನಡೆದ ಮೂರು ದೇಶಗಳ ಪ್ರತಿನಿಧಿಗಳ ತೃಪಕ್ಷೀಯ ಜಂಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಸೈಬರ್ ಭದ್ರತೆ ಮತ್ತು ಸಾಮಾಜಿಕ ಆರ್ಥಿಕ ಸಂಬಂಧಗಳ ಬಗ್ಗೆ ಮಾತನಾಡಿದ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್ ನಿರ್ದೇಶಕ ಡಾ.ಅರವಿಂದ್ ಗುಪ್ತಾ, ಸೈಬರ್ ಎಂದರೆ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕ, ಸಾಮಾಜಿಕ ವಿಷಯಗಳಿಗೆ ಕೂಡ ಸಂಬಂಧಿಸಿದ್ದಾಗಿದೆ. ಅದರಲ್ಲಿ ರಾಜಕೀಯ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಹಾಗೂ ಇತರ ಪ್ರಮುಖ ಮೂಲಸೌಕರ್ಯ ಅಂಶಗಳನ್ನು ಒಳಗೊಂಡಿದೆ. 
ಇದರಿಂದಾಗಿ ಸೈಬರ್ ಭದ್ರತೆ ಮತ್ತು ಸುರಕ್ಷತೆ ಮೂಲ ಸಮಸ್ಯೆಯಾಗಿದೆ. ಸೈಬರ್ ಭದ್ರತೆಗೆ ಗಮನ ಹರಿಸದಿದ್ದರೆ ಅದರ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಗಂಭೀರವಾಗಬಹುದು ಎಂದು ಸಭೆಯಲ್ಲಿ ಚರ್ಚೆಗೆ ಬಂತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com