ಡೊಕ್ಲಾಂ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಇಂಡೋ-ಚೀನಾ ಗಡಿ ಭದ್ರತಾ ಸಭೆ!

ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಗೆ ಮುಂದಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಗೆ ಮುಂದಾಗಿವೆ.
ಚೀನಾದ ಬೀಜಿಂಗ್ ನಲ್ಲಿ 10ನೇ ಭಾರತ-ಚೀನಾ ಗಡಿ ವ್ಯವಹಾರ ಸಭೆ (WMCC)ನಡೆಯಲಿದ್ದು, ಸಭೆಯಲ್ಲಿ ಉಭಯ ದೇಶಗಳ ನಡುವಿನ ಸಮನ್ವಯಕ್ಕಾಗಿ ಕಾರ್ಯನಿರ್ವಹಿಸುವ ಕಾರ್ಯವಿಧಾನ ಸಮಾಲೋಚನೆ  ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಮಿಲಿಟರಿ ಸಂಪರ್ಕ ಮತ್ತು ಗಡಿ ವಿವಾದಗಳ ಸಂಬಂಧ ಈ ಸಭೆಯ ಉಭಯ ದೇಶಗಳ ಸೇನಾಧಿಕಾರಿಗಳು ಹಾಗೂ ಅಧಿಕಾರಿಗಳು ಮಹತ್ವದ ಚರ್ಚೆ ನಡೆಸಲಿದ್ದಾರೆ.
ಈ ಹಿಂದೆ ಉಭಯ ದೇಶಗಳ ಯೋಧರ ತಿಕ್ಕಾಟಕ್ಕೆ ಕಾರಣವಾಗಿ ವಿಶ್ವ ಸಮುದಾಯದಲ್ಲಿ ಚರ್ಚೆಗೀದ್ದ ಡೊಕ್ಲಾಂ ನಂತಹ ವಿವಾದಗಳು ಭವಿಷ್ಯದಲ್ಲಿ ಮತ್ತೆ ಉಂಟಾಗದಂತೆ ಉಭಯ ದೇಶಗಳ ಮುಖಂಡರು ಚರ್ಚೆ ನಡೆಸಲಿದ್ದಾರೆ.  ಈ ಮಹತ್ವದ ಸಭೆಯಲ್ಲಿ ವಿವಾದಿತ ಗಡಿಯಲ್ಲಿ ಉಭಯ ದೇಶಗಳೂ ತಮ್ಮ ತಮ್ಮ ಸೇನೆ ನಿಯೋಜನೆ ಮಾಡದ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
 2012ರಲ್ಲಿ ಮೊದಲ ಬಾರಿಗೆ WMCC ಸಭೆ ನಡೆದಿತ್ತು.  ಮುಂದಿನ ತಿಂಗಳು ಬೀಜಿಂಗ್ ನಲ್ಲಿ ನಡೆಯುವ ಸಭೆ 10ನೇ ಸಭೆಯಾಗಿದ್ದು,  ಗಡಿ ಭದ್ರತೆ ಸಂಬಂಧ ಉಭಯ ದೇಶಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಅಂತೆಯೇ  ವಿವಾದಿತ ಗಡಿ ಪ್ರದೇಶಗಳ ಕುರಿತೂ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಈ ಹಿಂದೆ ವಿವಾದಿತ ಡೊಕ್ಲಾಂ ಪ್ರದೇಶದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆ ನಡೆದಿತ್ತು. ವಿಶ್ವಸಂಸ್ಥೆ ಕೂಡ ಮಾತುಕತೆ ಮೂಲಕ ಸಮಸ್ಯೆ ನಿವಾರಿಸಿಕೊಳ್ಳುವಂತೆ ಸಲಹೆ ನೀಡಿತ್ತು.  ಬಳಿಕ ಗಡಿ ವಿವಾದ ನಿವಾರಣೆಗೆ ಭಾರತ ಮತ್ತು ಚೀನಾ ದೇಶಗಳು ತಮ್ಮ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com