ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡಾಕ್ಟರ್ ಆಗಬೇಕೆಂದು ವೈದ್ಯಕೀಯ ವೃಂದ ಅಭಿಮತ

2017ನೇ ವರ್ಷದ ವಿಶ್ವ ಸುಂದರಿಯಾಗಿ ಆಯ್ಕೆಗೊಂಡಿರುವ ಮನುಷಿ ಚಿಲ್ಲರ್ ....
ಮಾನುಷಿ ಚಿಲ್ಲರ್
ಮಾನುಷಿ ಚಿಲ್ಲರ್
ನವದೆಹಲಿ: 2017ನೇ ವರ್ಷದ ವಿಶ್ವ ಸುಂದರಿಯಾಗಿ ಆಯ್ಕೆಗೊಂಡಿರುವ ಮನುಷಿ ಚಿಲ್ಲರ್ ಅವರನ್ನು ಅಭಿನಂದಿಸಿರುವ ವೈದ್ಯಕೀಯ ವೃಂದ, ಅವರು ವೈದ್ಯೆಯಾಗಿ ಮುಂದುವರಿಯಬೇಕೆಂದು ಬಯಸಿದ್ದಾರೆ.
ಹರ್ಯಾಣ ಮೂಲದ ಮನುಷಿ ಚಿಲ್ಲರ್ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯೆಯಾಗಿ ಬಯಸುತ್ತಿದ್ದು ಸೊನೆಪತ್ ನ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ. 
ಈ ಬಗ್ಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಔಷಧ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವೈ.ಕೆ.ಗುಪ್ತಾ, ವೈದ್ಯಕೀಯ ವಿದ್ಯಾರ್ಥಿನಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಸೌಂದರ್ಯ ಜೊತೆಗೆ ಬುದ್ಧಿವಂತಿಕೆ, ಕಠಿಣ ಪರಿಶ್ರಮವನ್ನು ಹೊಂದಿದ ಅಪರೂಪದ ವಿದ್ಯಾರ್ಥಿನಿ ಮನುಷಿ.ಆಕೆ ಓದಿನಲ್ಲಿಯೂ ಮುಂದಿರುವುದರಿಂದ ವೈದ್ಯಯಾಗಬೇಕೆಂದು ನಾನು ಬಯಸುತ್ತೇನೆ ಎನ್ನುತ್ತಾರೆ. 
ಇಡೀ ವಿಶ್ವದ ಜನರು ಆಕೆಯನ್ನು ಗಮನಿಸುತ್ತಿರುವುದರಿಂದ ಸಿನಿಮಾ, ಗ್ಲಾಮರ್ ಜಗತ್ತಿಗೆ ಆಕೆಗೆ ಕಾಲಿಡುವುದು ಸುಲಭ. ಹೆಚ್ಚಿನ ಸುಂದರಿಯರು ಅದೇ ಹಾದಿಯನ್ನು ಹಿಡಿಯುತ್ತಾರೆ. ಆದರೆ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಅವರು ಓದು ಪೂರೈಸಿ ವೈದ್ಯಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಡಾ.ಗುಪ್ತಾ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com