ಅಪಘಾತ ಸಂಭವಿಸಿದ ರೈಲು ಮತ್ತು ಅಲ್ಲಿನ ಪರಿಸ್ಥಿತಿಯ ಚಿತ್ರ(ಫೋಟೋ ಕೃಪೆ-ಎಎನ್ಐ)
ಅಪಘಾತ ಸಂಭವಿಸಿದ ರೈಲು ಮತ್ತು ಅಲ್ಲಿನ ಪರಿಸ್ಥಿತಿಯ ಚಿತ್ರ(ಫೋಟೋ ಕೃಪೆ-ಎಎನ್ಐ)

ಉತ್ತರ ಪ್ರದೇಶ: ವಾಸ್ಕೊ ಡ ಗಾಮ-ಪಟ್ನಾ ರೈಲು ಹಳಿ ತಪ್ಪಿ 3 ಸಾವು, 9 ಮಂದಿಗೆ ಗಾಯ

ವಾಸ್ಕೊ ಡಿ ಗಾಮಾ ಪಾಟ್ನಾ ಎಕ್ಸ್ ಪ್ರೆಸ್ ರೈಲು ಶುಕ್ರವಾರ ನಸುಕಿನ ಜಾವ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಬಾಂಡಾದ ಹತ್ತಿರ ಹಳಿ ತಪ್ಪಿದ ಕಾರಣ ಕನಿಷ್ಠ ಮೂವರು ಪ್ರಯಾಣಿಕರು ಮೃತಪಟ್ಟು....
ಲಕ್ನೋ: ವಾಸ್ಕೊ ಡಿ ಗಾಮಾ ಪಾಟ್ನಾ ಎಕ್ಸ್ ಪ್ರೆಸ್ ರೈಲು ಶುಕ್ರವಾರ ನಸುಕಿನ ಜಾವ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಬಾಂಡಾದ ಹತ್ತಿರ ಹಳಿ ತಪ್ಪಿದ ಕಾರಣ ಕನಿಷ್ಠ ಮೂವರು ಪ್ರಯಾಣಿಕರು ಮೃತಪಟ್ಟು 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಾಣಿಕ್ ಪುರ್ ರೈಲ್ವೆ ನಿಲ್ದಾಣದ ಹತ್ತಿರ ವಾಸ್ಕೊ ಡಿ ಗಾಮಾ-ಪಾಟ್ನಾ ಎಕ್ಸ್ ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿವೆ.
ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ರೈಲು ಇಂದು ನಸುಕಿನ ಜಾವ 4.18ರ ಸುಮಾರಿಗೆ ಮಾಣಿಕ್ ಪುರ ರೈಲು ನಿಲ್ದಾಣದ ಹತ್ತಿರ ಹಳಿ ತಪ್ಪಿತು. ಇದಕ್ಕೂ ಮುನ್ನ ನಿನ್ನೆ ಲಕ್ನೋದ ಹತ್ತಿರ ಪ್ರಯಾಣಿಕರ ರೈಲೊಂದು ಬೊಲೆರೊಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು. 
ರೈಲಿನ 13 ಬೋಗಿಗಳು ನಸುಕಿನ ಜಾವ 4.18ರ ಹೊತ್ತಿಗೆ ಹಳಿಯಿಂದ ಜಾರಿ ಅಪಘಾತ ಸಂಭವಿಸಿದೆ. ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿಯೇ ಅಪಘಾತ ಸಂಭವಿಸಿದೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರ ಮಧ್ಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಳ್ವೀಯಾ ತಿಳಿಸಿದ್ದಾರೆ.
ಅಪಘಾತವಾದ ಸ್ವಲ್ಪ ಹೊತ್ತಿನಲ್ಲಿಯೇ ಬೆಳಗ್ಗೆ 5.20ರ ಹೊತ್ತಿಗೆ ವೈದ್ಯಕೀಯ ತರಬೇತಿ ತಂಡ ಸ್ಥಳಕ್ಕೆ ಧಾವಿಸಿತು. ಅಲಹಾಬಾದ್ ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ಉತ್ತರ ಮಧ್ಯ ರೈಲ್ವೇಯ ಪ್ರಧಾನ ವ್ಯವಸ್ಥಾಪಕರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯವಾದವರ ಕುಟುಂಬಕ್ಕೆ ತಲಾ 50,000 ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವಾಲಯ ಘೋಷಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com