ಕಳಪೆ ಗುಣಮಟ್ಟದ ನೂಡಲ್ಸ್ ಪೂರೈಕೆ: ನೆಸ್ಲೆ ಇಂಡಿಯಾಗೆ ದಂಡ ಹಾಕಿದ ಕೋರ್ಟ್

ಕಳಪೆ ಗುಣಮಟ್ಟದ ನೂಡಲ್ಸ್ ಮಾರಾಟ ಮಾಡಿದ್ದಕ್ಕಾಗಿ ನ್ಯಾಯಾಲಯವೊಂದು ನೆಸ್ಲೆ ಇಂಡಿಯಾ ಕಂಪೆನಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕಳಪೆ ಗುಣಮಟ್ಟದ ನೂಡಲ್ಸ್ ಮಾರಾಟ ಮಾಡಿದ್ದಕ್ಕಾಗಿ ನ್ಯಾಯಾಲಯವೊಂದು ನೆಸ್ಲೆ ಇಂಡಿಯಾ ಕಂಪೆನಿಗೆ 45 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ ಆ ಮ್ಯಾಗಿಯ ವಿತರಕರಿಗೂ ಕೂಡ 26 ಲಕ್ಷ ರೂಪಾಯಿ ದಂಡ ಹಾಕಿದೆ ಎಂದು ಉತ್ತರ ಪ್ರದೇಶದ ಶಹಜಾನ್ ಪುರ ಜಿಲ್ಲಾ ನ್ಯಾಯಾಲಯದ ಕಾನೂನು ಅಧಿಕಾರಿ ರಂಜನ್ ಸಿಂಗ್ ತಿಳಿಸಿದ್ದಾರೆ.
ಸ್ವೀಡನ್ ಮೂಲದ ನೂಡಲ್ಸ್ ಕಂಪೆನಿಯ ಭಾರತೀಯ ಘಟಕದ ಮ್ಯಾಗಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೀಸ, ಬೂದಿ ಮತ್ತು ಮೊನೊಸೋಡಿಯಂ ಗ್ಲುಟಮೇಟ್ (ಎಂಎಸ್ಜಿ) ಪತ್ತೆಯಾಯಿತು. ಉತ್ತರ ಪ್ರದೇಶದ ವಿವಿಧ ಅಂಗಡಿಗಳಿಂದ 2015 ಮತ್ತು 2016ರಲ್ಲಿ ಪಡೆದ ಮ್ಯಾಗಿ ನೂಡಲ್ಸ್ ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.
ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ನೆಸ್ಲೆ ಇಂಡಿಯಾದ ವಕ್ತಾರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಆದೇಶ ನಮ್ಮ ಕೈ ಸೇರಿದ ಕೂಡಲೇ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನೆಸ್ಲೆ ಇಂಡಿಯಾ ಕಂಪೆನಿಯ ಖ್ಯಾತ ನೂಡಲ್ಸ್ ಆಗಿರುವ ಮ್ಯಾಗಿಯ ಮಾರಾಟವನ್ನು 2015ರ ಜೂನ್ ನಲ್ಲಿ 6 ತಿಂಗಳ ಕಾಲ ನಿಷೇಧಿಸಲಾಗಿತ್ತು. ಇದರಲ್ಲಿ  ರಾಸಾಯನಿಕ ಅಂಶಗಳು ಅನುಮತಿ ಮಟ್ಟಕ್ಕಿಂತ ಅಧಿಕವಿದೆ ಎಂದು ಆರೋಪಿಸಲಾಗಿತ್ತು.
2015ರಲ್ಲಿ ಕಂಪೆನಿ 38,000 ಟನ್ ಮ್ಯಾಗಿ ನೂಡಲ್ಸ್ ಗಳನ್ನು ಮಳಿಗೆಗಳಿಂದ ಹಿಂತೆಗೆದುಕೊಂಡು ನಾಶಪಡಿಸಬೇಕಾಗಿತ್ತು. ನಂತರ ಅದೇ ವರ್ಷ ನವೆಂಬರ್ ನಲ್ಲಿ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com