ಭ್ರಷ್ಟಾಚಾರ ರಹಿತ ಮತ್ತು ನಾಗರಿಕ ಕೇಂದ್ರಿತ, ಅಭಿವೃದ್ಧಿ-ಕೇಂದ್ರಿತ ಪರಿಸರವನ್ನು ಅಭಿವೃದ್ಧಿಪಡಿಸುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎ ನೋಟು ನಿಷೇಧಕ್ಕೂ ಮುನ್ನ ಪ್ರತ್ಯೇಕ ಸಮಾನಾಂತರ ಆರ್ಥಿಕತೆಯಾಗಿದ್ದ ಕಪ್ಪುಹಣ ನೋಟು ನಿಷೇಧದ ಬಳಿಕ ಔಪಚಾರಿಕ ವ್ಯವಸ್ಥೆಯಲ್ಲಿ ಸೇರಿ ಹೋಗಿದೆ. ನೋಟು ನಿಷೇಧ ಬಳಿಕ ವಿತ್ತ ಸಚಿವಾಲಯದ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದತ್ತಾಂಶ ಸಂಗ್ರಹಣೆ ಮೂಲಕ ಕಪ್ಪುಹಣವನ್ನು ಬಯಲಿಗೆಳೆದಿದ್ದೇವೆ. ಈ ಪೈಕಿ ಆಧಾರ್ ಪಾತ್ರ ಗಣನೀಯವಾಗಿದ್ದು, ಬೇನಾಮಿ ಆಸ್ತಿ ಪತ್ತೆ ಹಚ್ಚುವಿಕೆಗೆ ದೊಡ್ಡ ಸಾಧನವಾಗಿದೆ ಎಂದು ಮೋದಿ ಬಣ್ಣಿಸಿದರು.