ಅತ್ಯಾಚಾರ ಆರೋಪಿ ಪಂಜಾಬ್ ಮಾಜಿ ಸಚಿವ ಸುಚಾ ಸಿಂಗ್ ಲಾಂಗಹ್ ಕೋರ್ಟ್ ಗೆ ಶರಣು

ಕಳೆದ ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿ, ಪಂಜಾಬ್ ಮಾಜಿ ಸಚಿವ ಸುಚಾ ಸಿಂಗ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಚಂಡೀಗಢ: ಕಳೆದ ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿ, ಪಂಜಾಬ್ ಮಾಜಿ ಸಚಿವ ಸುಚಾ ಸಿಂಗ್ ಲಾಂಗಹ್ ಅವರು ಸೋಮವಾರ ದಿಢೀರ್ ಜಿಲ್ಲಾ ಸೆಷನ್ಸ್ ಕೋರ್ಟ್ ಗೆ ಶರಣಾಗಿದ್ದಾರೆ.
ಪಂಜಾಬ್ ಮಹಿಳಾ ಪೊಲೀಸ್ ಪೇದೆಯೊಬ್ಬರು ಸುಚಾ ಸಿಂಗ್ ಲಾಂಗಹ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕಳೆದ ಶುಕ್ರವಾರ ಗುರುದಾಸ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಿರೋಮಣಿ ಅಕಾಲಿ ದಳದ ನಾಯಕ ಸುಚಾ ಸಿಂಗ್ ಅವರು ಇಂದು ತಮ್ಮ ವಕೀಲರೊಂದಿಗೆ ಗುರುದಾಸ್ಪುರ ಬದಲು ಚಂಡೀಗಢ ಕೋರ್ಟ್ ಗೆ ಶರಣಾಗಿದ್ದಾರೆ.
2007ರಿಂದ 2012ರವರೆಗೆ ಕೃಷಿ ಸಚಿವರಾಗಿದ್ದ ಸುಚಾ ಸಿಂಗ್ ಅವರು, 2009ರಿಂದ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿರುವುದಾಗಿ ಮಹಿಳಾ ಪೇದೆ ಆರೋಪಿಸಿದ್ದಾರೆ.  
ನೊಂದ ಮಹಿಳೆ ಸುಚಾ ಸಿಂಗ್ ಲಾಂಗಹ್ ಪುತ್ರಿಯ ಕ್ಲಾಸ್ ಮೆಟ್ ಆಗಿದ್ದು, ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೇದೆ ದೂರು ನೀಡಿದ್ದಾರೆ.
ಸಂತ್ರಸ್ಥ ಮಹಿಳೆ ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿಕೊಂಡು ಅದನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ. ಪೊಲೀಸ್ ಪೇದೆಯಾಗಿದ್ದ ಆಕೆಯ ಪತಿ ಮೃತಪಟ್ಟಿದ್ದ. ಹಾಗಾಗಿ ಕೆಲಸ ಕೇಳಿಕೊಂಡು ಮಹಿಳೆ ಮಾಜಿ ಸಚಿವರನ್ನು ಭೇಟಿ ಮಾಡಿದ್ದರು. ಆದರೆ ಎರಡು ದಿನಗಳ ಬಳಿಕ ಒಂಟಿಯಾಗಿ ಭೇಟಿ ಮಾಡುವಂತೆ ಸಿಂಗ್ ಸೂಚಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com