ಪ್ರವಾಸಿಗರು ಯಾವ ಆಹಾರ ಸೇವಿಸಬೇಕು ಎಂದು ನಿರ್ಧರಿಸುವುದು ಸರ್ಕಾರದ ಕೆಲಸವಲ್ಲ: ನೀತಿ ಆಯೋಗ ಸಿಇಒ

ಪ್ರವಾಸಿಗರು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ಸೇವಿಸಬಾರದು ಎಂಬುದನ್ನು ನಿರ್ಧರಿಸುವುದು ಸರ್ಕಾರದ ಕೆಲಸವಲ್ಲ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಶನಿವಾರ ಹೇಳಿದ್ದಾರೆ...
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್
Updated on: 

ನವದೆಹಲಿ: ಪ್ರವಾಸಿಗರು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ಸೇವಿಸಬಾರದು ಎಂಬುದನ್ನು ನಿರ್ಧರಿಸುವುದು ಸರ್ಕಾರದ ಕೆಲಸವಲ್ಲ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಶನಿವಾರ ಹೇಳಿದ್ದಾರೆ. 

ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಆಹಾರ ಆಯ್ಕೆ ಕುರಿತಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವ ಅವರು, ಪ್ರವಾಸಿಗರು ಯಾವುದನ್ನು ತಿನ್ನಬೇಕು, ಕುಡಿಯಬೇಕೆಂಬುದನ್ನು ನಿರ್ಧರಿಸುವುದು ಸರ್ಕಾರದ ಕೆಲಸವಲ್ಲ. ಯಾವುದನ್ನು ತಿನ್ನಬೇಕು ಹಾಗೂ ಕುಡಿಯಬೇಕೆಂಬುದು ವ್ಯಕ್ತಿಯ ಆಯ್ಕೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. 

ಪ್ರವಾಸೋದ್ಯಮವು ಮೂಲಭೂತವಾಗಿ ನಾಗರೀಕರತೆಯನ್ನು ಹೊಂದಿರುವಂತಹದ್ದಾಗಿದೆ. ಕಸಗಳನ್ನು ಇಟ್ಟುಕೊಂಡು ನಮ್ಮಲ್ಲಿ ಉತ್ತಮ ಪರಂಪರೆ ತಾಣಗಳಿವೆ ಎಂದು ಹೇಳುವುದು ಸರಿಯಲ್ಲ. ಭಾರತ ಮೊದಲು ಸ್ವಚ್ಛತೆಯೆಡೆಗೆ ಗಮನಹರಿಸಬೇಕು. ಪ್ರವಾಸಿಗರಿಗೆ ತಡೆರಹಿತ ಅನುಭವಗಳನ್ನು ನೀಡಬೇಕು. ಪ್ರವಾಸವೆಂದರೆ ಅನುಭವ, ಪ್ರವಾಸಕ್ಕೆ ಹೋಗುವ ವ್ಯಕ್ತಿ ಕೆಲವೊಮ್ಮೆ ವಿಶ್ರಾಂತಿ ಪಡೆಯಲು ಇಚ್ಛಿಸುತ್ತಾನೆ...ಇನ್ನು ಕೆಲವೊಮ್ಮೆ ಬೇರೇ ಬೇರೇ ರೀತಿಯ ಚಿಂತನೆಗಳನ್ನು ಇಟ್ಟುಕೊಂಡಿರುತ್ತಾನೆ. ಹೀಗಾಗಿ ಅವರ ಭಾರತೀಯ ಸಂಸ್ಕೃತಿಯಂತೆಯೇ ಅವರಿಗೆ ಅನುಭವಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com