ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರ ಜಡೆಗಳಿಗೆ ಕತ್ತರಿ ಹಾಕಲಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು ಇದರಿಂದ ರೊಚ್ಚಿಗೆದ್ದಿರುವ ಸ್ಥಳೀಯರು ಶಂಕೆಯಿಂದ ಸಿಕ್ಕ ಸಿಕ್ಕವರನ್ನು ಥಳಿಸುತ್ತಿದ್ದು, ನಿನ್ನೆ ಬಿಎಸ್ಎಫ್ ಯೋಧನೊಬ್ಬನ ಮೇಲೆ ಉದ್ರಿಕ್ತ ಸ್ಥಳೀಯರು ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ಸಹ ಯೋಧರು ಯೋಧನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರವಾಗಿ ಥಳಿತಕ್ಕೊಳಗಾಗಿರುವ ಯೋಧನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.