ತಿರುಚಿ(ತಮಿಳುನಾಡು): ಚಾಲಕನ ನಿಯಂತ್ರಣ ತಪ್ಪಿ ಎಸ್ಯುವಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ತಿರುಚಿಯಲ್ಲಿ ಸಂಭವಿಸಿದೆ.
ಚೆನ್ನೈ-ತಿರುಚಿನಪಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಏಳು ಮಂದಿ ದಾರುಣ ಸಾವನ್ನಪ್ಪಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಚೆನ್ನೈ ಮೂಲದ ಪ್ರದೀಪ್, ಪ್ರಕಾಶ್, ಪ್ರಿಯಾ, ಜೋಸೆಫ್, ಕುಟ್ಟಿ ಮತ್ತು ಕಾರು ಚಾಲಕ ಶಿವ ಎಂದು ಗುರುತಿಸಲಾಗಿದೆ.
ಪ್ರಯಾಣಿಕರು ಕಾರಿನಲ್ಲಿ ಕೇರಳದ ಪಥನಂತಿಟ್ಟಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.