ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಮಾಜವಾದಿ ಪಕ್ಷ ಬೆಂಬಲ: ಅಖಿಲೇಶ್ ಯಾದವ್

ಗುಜರಾತಿನ 182 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಮತ್ತು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲಿದೆ ......
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Updated on: 
ಲಕ್ನೋ: ಗುಜರಾತಿನ 182 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಮತ್ತು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಬಿಜೆಪಿ ವಿರೋಧಿ ಮತಗಳಲ್ಲಿ ಒಡಕು ಉಂಟಾಗುವುದನ್ನು ನಾವು ಬಯಸುವುದಿಲ್ಲ, ಹೀಗಾಗಿ ಬಲವಾದ ಸಾಂಸ್ಥಿಕ ನೆಲೆಯನ್ನು ಪಡೆದಿರುವ ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಲಿದ್ದೇವೆ ಎಂದು ಅವರು ಹೇಳಿದರು.
"ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡುತ್ತೇನೆ.ಹಾಗೆಯೇ ಯಾವುದೇ ಪಕ್ಷ ತಮ್ಮ ಪರವಾಗಿ ಪ್ರಚಾರ ಮಾಡುವಂತೆ ನನ್ನನ್ನು ಸಂಪರ್ಕಿಸಿದರೆ ಆಗ ಆ ಪಕ್ಷದ ಪರ ಪ್ರಚಾರ ಮಾಡುತ್ತೇನೆ" ಎಂದರು.
ಈ ವರ್ಷಾರಂಬದಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದ್ದವು. ಅದರಂತೆ ಕಾಂಗ್ರೆಸ್ 403 ಸ್ಥಾನಗಳ ಪೈಕಿ 105 ರಲ್ಲಿ ಸ್ಪರ್ಧಿಸಿತ್ತು. ಸಮಾಜವಾದಿ ಪಕ್ಷ 298 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.
ಒಟ್ಟಾರೆ ಇನ್ನು ದಿನಾಂಕ ಘೋಷಣೆಯಾಗದಿದ್ದರೂ ದಿನದಿಂದ ದಿನಕ್ಕೆ ಗುಜರಾತ್ ಚುನಾವಣಾ ಕಣ ರಂಗೇರುತ್ತಿರುವುದು ಮಾತ್ರ ಸುಳ್ಳಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com