ರಸ್ತೆ ಅಪಘಾತದಲ್ಲಿ ಮಹಿಳಾ ಬೈಕರ್ ಸನಾ ಇಕ್ಬಾಲ್ ದುರ್ಮರಣ

ದೇಶದ ಉದ್ದಗಲ ಬೈಕು ಸಂಚಾರ ಮಾಡಿ ಮಹಿಳಾ ಬೈಕರ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಸನಾ ಇಕ್ಬಾಲ್ ರಸ್ತೆ ಅಪಘಾತದಲ್ಲಿ ಮರಣ....
ಸನಾ ಇಕ್ಬಾಲ್
ಸನಾ ಇಕ್ಬಾಲ್
ಹೈದರಾಬಾದ್: ದೇಶದ ಉದ್ದಗಲ ಬೈಕು ಸಂಚಾರ ಮಾಡಿ ಮಹಿಳಾ ಬೈಕರ್ ಎಂಬ ಕೀರ್ತಿಗೆ ಪಾತ್ರವಾಗಿದ್ದ  ಹೈದರಾಬಾದ್ ನ ಸನಾ ಇಕ್ಬಾಲ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. 
ಇಂದು ಬೆಳಗ್ಗೆ ಹೈದರಾಬಾದ್ ನ  ಹೊರ ವರ್ತುಲ ರಸ್ತೆಯಲ್ಲಿ ನಡೆದ ಕಾರು ಅಪಘಾತದಲ್ಲಿ 29 ವರ್ಷದ ಸನಾ ಸಾವನ್ನಪ್ಪಿದ್ದಾರೆ. 
ಸನಾ ಮತ್ತು ಅವರ ಪತಿ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸನಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತರಾದರೆ, ಅವರ ಪತಿಯ ಸ್ಥಿತಿ ಚಿಂತಾಜನಕವಾಗಿದೆ. 
ಖಿನ್ನತೆ ಮತ್ತು ಆತ್ಮಹತ್ಯೆಯಂಥ ಸಮಸ್ಯೆಗಳ ವಿರುದ್ಧ ದೇಶಾದ್ಯಂತ ಜಾಗೃತಿ ಕಾರ್ಯಕ್ರಮ ನೀಡುವ ಸಲುವಾಗಿ ಸನಾ 38,000 ಕಿ.ಮೀ. ಬೈಕು ಚಲಾಯಿಸಿದ್ದರು. 7ನೇ ತರಗತಿಯಿಂದಲೇ ಸನಾ  ಬೈಕ್ ಗಳನ್ನು ಚಲಾಯಿಸಲು ಆರಂಭಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com