ತಕ್ಷಣ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ; ಪಾಕ್ ಗೆ ಭಾರತ-ಅಮೆರಿಕ ಸೂಚನೆ: ಸುಷ್ಮಾ

ತಕ್ಷಣವೇ ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚಿಸಲು ಭಾರತ-ಅಮೆರಿಕ...
ರೆಕ್ಸ್ ಟಿಲ್ಲರ್ ಸನ್ - ಸುಷ್ಮಾ ಸ್ವರಾಜ್
ರೆಕ್ಸ್ ಟಿಲ್ಲರ್ ಸನ್ - ಸುಷ್ಮಾ ಸ್ವರಾಜ್
Updated on: 
ನವದೆಹಲಿ: ತಕ್ಷಣವೇ ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚಿಸಲು ಭಾರತ-ಅಮೆರಿಕ ಒಪ್ಪಿಕೊಂಡಿರುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಸನ್ ಅವರ ಭೇಟಿಯ ಬಳಿಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ.
ರೆಕ್ಸ್ ಟಿಲ್ಲರ್ ಸನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಮಾತ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಅಫ್ಘಾನಿಸ್ತಾನ ನೀತಿಯನ್ನು ಜಾರಿಗೊಳಿಸಲು ಭಾರತ-ಅಮೆರಿಕ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
'ನಾವು ಭಯೋತ್ಪದಾನೆ ಬಗ್ಗೆ ತುಂಬಾ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಭಯೋತ್ಪಾದನೆ ವಿಶ್ವ ಬಹು ದೊಡ್ಡ ಬೆದರಿಕೆ ಆಗಿದೆ. ನಾನು ರೆಕ್ಸ್ ಇಬ್ಬರೂ ಟ್ರಂಪ್ ಅವರ ಹೊಸ ಅಫ್ಘಾನಿಸ್ತಾನ ನೀತಿ ಬಗ್ಗೆ ಮತ್ತು ದಕ್ಷಿಣ ಏಷ್ಯಾ ನೀತಿ ಬಗ್ಗೆಯೂ ಚರ್ಚೆ ನಡೆಸಿದ್ದು, ಇದರಿಂದ ನಿರೀಕ್ಷಿತ ಫಲಿತಾಂಶ ಬರಲಿದೆ' ಎಂದು ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಯಾವುದೇ ದೇಶ ಉಗ್ರರಿಗೆ ಸುರಕ್ಷಿತ ತಾಣವಾಗಬಾರದರು. ಇತ್ತೀಚಿಗೆ ಭಯೋತ್ಪಾದನೆ ಕೃತ್ಯಗಳು ಹೆಚ್ಚುತ್ತಿರುವುದರ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ ಎಂದು ಸುಷ್ಮಾ ಸ್ವರಾಜ್ ಅವರು ತಿಳಿಸಿದ್ದಾರೆ.
ಭಾರತ-ಅಮೆರಿಕ ಸಂಬಂಧ ವೃದ್ಧಿಗಾಗಿ ಟಿಲ್ಲರ್ ಸನ್ ಅವರು ನಿನ್ನೆ ಸಂಜೆ ದೆಹಲಿಗೆ ಆಗಮಿಸಿದ್ದು, ಭಾರತ ಜೊತೆಗಿನ ಅಮೆರಿಕ ಸಂಬಂಧದ ವ್ಯಾಪ್ತಿ ದಕ್ಷಿಣ ಏಷ್ಯಾಕ್ಕೆ ಮಾತ್ರ ಸೀಮಿತವಾಗಿಲ್ಲ, ಆದರೆ ಪಾಕಿಸ್ತಾನದ ಪ್ರಾದೇಶಿಕ ಹಿತಾಸಕ್ತಿಗಳನ್ನು ಮೀರಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ ಎಂದು ಹೇಳಿದ್ದಾರೆ. 
ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಭಾರತ - ಅಮೆರಿಕ ಶ್ರಮಿಸುತ್ತಿದ್ದು, ಪಾಕಿಸ್ತಾನ ಕೂಡ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತದೊಂದಿಗೆ ಸಹಕರಿಸಬೇಕು ಎಂದು ಟಿಲ್ಲರ್ ಸನ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com