ಸಾಲಮನ್ನಾ: ರೈತರ ಖಾತೆಗೆ 392 ಕೋಟಿ ಜಮೆ ಮಾಡಿದ ಮಹಾರಾಷ್ಟ್ರ ಸರ್ಕಾರ!

Published On :
ಮುಂಬೈ: ನಿರೀಕ್ಷೆಯಂತೆಯೇ ಮಹಾರಾಷ್ಟ್ರ ಸರ್ಕಾರ ತನ್ನ ರೈತರ ಸಾಲಮನ್ನಾ ಯೋಜನೆಗೆ ಚಾಲನೆ ನೀಡಿದ್ದು, 1.01 ಲಕ್ಷ ರೈತರ ಸಾಲಮನ್ನಾ ಮಾಡಿದೆ.
ಈ ಕುರಿತು ಶುಕ್ರವಾರ ಸಂಜೆ ಅಧಿಕಾರಿಗಳು ಫಲಾನುಭವಿ ರೈತರ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಇದಕ್ಕಾಗಿ ಸರ್ಕಾರ ಒಟ್ಟು 671.16 ಕೋಟಿ ವ್ಯಯಿಸಿದೆ ಎಂದು ತಿಳಿದುಬಂದಿದೆ. ರೈತರ ಸಾಲಮನ್ನಾ ಕುರಿತು ಸಿಎಂ ಫಡ್ನವಿಸ್ ಅವರು ಘೋಷಣೆ ಮಾಡಿದ ಬಳಿಕ ಸೂಕ್ತ ಫಲಾನುಭವಿ ರೈತರನ್ನು ಗುರುತಿಸುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಗೊಂದಲ ರಹಿತ ಫಲಾನುಭವಿ ರೈತರ ಪಟ್ಟಿ ತಯಾರಿಕೆಗಾಗಿ ಹರಸಾಹಸ ಪಟ್ಟಿದ್ದ ಅಧಿಕಾರಿಗಳು ಇದೀಗ 2.39 ಲಕ್ಷ ರೈತರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಎಲ್ಲ ರೈತರ ಸಲಮನ್ನಾಗಾಗಿ ಸರ್ಕಾರ ಒಟ್ಟು 899.12 ಲಕ್ಷ ಕೋಟಿ ವ್ಯಯಿಸಬೇಕಿದೆ.
ಇದೀಗ ಈ 2.39 ಲಕ್ಷ ರೈತರ ಪೈಕಿ ಮೊದಲ ಹಂತದಲ್ಲಿ 1.01 ಲಕ್ಷ ಫಲಾನುಭವಿ ರೈತರ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿನ ರೈತರ ಸಾಲ ಮನ್ನಾಗಾಗಿ ಸರ್ಕಾರ 671.16 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿರುವ ರೈತರ ಗರಿಷ್ಠ 25 ಸಾವಿರ ರು.ಗಳ ವರೆಗಿನ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ. ಈ ಸಂಬಂಧ ಈಗಾಗಲೇ ಫಲಾನುಭವಿ ರೈತರ 11 ವಿವಿಧ ಬ್ಯಾಂಕ್ ಖಾತೆಗಳಿಗೆ 392 ಕೋಟಿ ರು.ಹಣವನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಉಳಿದ ಹಣವನ್ನು ಶನಿವಾರ ಅಥವಾ ಸೋಮವಾರ ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿದೆ.
77.29 ಲಕ್ಷ ಖಾತೆಗಳಲ್ಲಿನ ಸಾಲಮನ್ನಾಗಾಗಿ ಒಟ್ಟು 56.59 ಲಕ್ಷ ಅರ್ಜಿಗಳು ಬಂದಿದ್ದು, ಯೋಜನೆಗಾಗಿ ಈ ಹಿಂದೆ 20 ಸಾವಿರ ಕೋಟಿ ರು.ಗಳನ್ನು ಅಂದಾಜಿಸಲಾಗಿತ್ತು. ಪ್ರಸ್ತುತ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಗೊಂದಲ ರಹಿತ ಫಲಾನುಭವಿ ರೈತರ ಪಟ್ಟಿ ತಯಾರಿಕೆಗೆ ಸರ್ಕಾರ ಆಧ್ಯತೆ ನೀಡಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


