ಟ್ವಿಟರ್ ನಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿರುವ ಸ್ಮೃತಿ ಇರಾನಿ ಅವರು, ಚಿದಂಬರಂ ಅವರ ಹೇಳಿಕೆ ಅಸಹ್ಯಕರ ಎಂದು ಹೇಳಿದ್ದಾರೆ. "ಭಾರತ ದೇಶದ ಐಕ್ಯತೆಗೆ ಮತ್ತು ಸುಭದ್ರತೆಗೆ ಧಕ್ಕೆತರುವ ರೀತಿಯಲ್ಲಿ ಚಿದಂಬರಂ ಹೇಳಿಕೆ ನೀಡಿದ್ದು, ದೇಶದ ಭದ್ರತಾ ಪಡೆಯ ಯೋಧರನ್ನು ಕೊಲೆಗೈಯ್ಯಲು ಯತ್ನಿಸುತ್ತಿರುವವರ ಪರವಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.