ಉಗ್ರರ ನಂಟು ಶಂಕೆ: ದಿಯೋಬಂದ್, ಮುಜಾಫರ್'ನಗರದ ಎಲ್ಲಾ ಪಾಸ್'ಪೋರ್ಟ್'ಗಳ ತನಿಖೆಗೆ ಮುಂದಾದ ಸರ್ಕಾರ

ಉತ್ತರಪ್ರದೇಶ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗ ತೊಡಗಿರುವ ಹಿನ್ನಲೆಯಲ್ಲಿ ದಿಯೋಬಂದ್ ಹಾಗೂ ಮುಜಾಫರ್ ನಗರದ ಎಲ್ಲಾ ಪಾಸ್'ಪೋರ್ಟ್ ಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಜಾಫರ್'ನಗರ: ಉತ್ತರಪ್ರದೇಶ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗ ತೊಡಗಿರುವ ಹಿನ್ನಲೆಯಲ್ಲಿ ದಿಯೋಬಂದ್ ಹಾಗೂ ಮುಜಾಫರ್ ನಗರದ ಎಲ್ಲಾ ಪಾಸ್'ಪೋರ್ಟ್ ಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. 

ಕೆಲ ದಿನಗಳ ಹಿಂದಷ್ಟೇ ಬಾಂಗ್ಲಾದೇಶ ಮೂಲದ ಇಬ್ಬರು ಶಂಕಿತ ಉಗ್ರರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಉಗ್ರರು ದಿಯೋಬಂದ್ ವಿಳಾಸದಲ್ಲಿರುವ ಭಾರತದ ಪಾಸ್'ಪೋರ್ಟ್ ಗಳನ್ನು ತೋರಿಸಿದ್ದರು. 

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂಲದ ಉಗ್ರರು ದಿಯೋಬಂದ್ ನಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ದಿಯೋಬಂದ್ ಹಾಗೂ ಮುಜಾಫರ್ ನಗರದಲ್ಲಿರುವ ಎಲ್ಲಾ ಪಾಸ್ ಪೋರ್ಟ್ ಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

ದಿಯೋಬಂದ್ ಹಾಗೂ ಮುಜಾಫರ್ ನಗರದಲ್ಲಿ ಅಕ್ರಮವಾಗಿ ನೆಲೆಯೂರಿರುವ ಬಾಂಗ್ಲಾದೇಶಿಗರ ವಿರುದ್ಧ ಕ್ರಮಗೊಳ್ಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್'ಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಬಾಂಗ್ಲಾದೇಶ ರಾಷ್ಟ್ರೀಯರಿಗೆ ನಕಲಿ ಗುರುತಿನ ಚೀಟಿ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾಸಿಗೆ ಸೂಚಿಸಿದೆ ಎನ್ನಲಾಗಿದೆ. 

ದಿಯೋಬಂದ್ ಒಂದರಲ್ಲಿ ಮಾತ್ರವಲ್ಲದೆ ಮುಜಾಫರ್'ನಗರ ಮತ್ತು ಸಹರಾನ್ಪುರದಲ್ಲಿಯೂ ಉಗ್ರರ ಚಟುವಟಿಕೆಗಳು ಕಂಡುಬಂದಿದ್ದು, ಉತ್ತರಪ್ರದೇಶ ಇತರೆಡೆಯೂ ಪಾಸ್'ಪೋರ್ಟ್ ಗಳ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ ಎಂದು ಸಹರಾನ್ಪುರ ಡಿಐಜಿ ಕೆ.ಎಸ್. ಎಮ್ಮಾನ್ಯುಯಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com