ಇನ್ನು ಇದೇ ಮೊದಲ ಬಾರಿಗೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿವೃತ್ತ ಅಧಿಕಾರಿಗಳಿಗೆ ಕೇಂದ್ರ ಸಚಿವ ಸ್ಥಾನ ನೀಡುತ್ತಿದ್ದು, ಭಾರತೀಯ ವಿದೇಶ ಸೇವೆಯ (ಐಎಫ್‌ಎಸ್) ನಿವೃತ್ತ ಅಧಿಕಾರಿ, ಪಂಜಾಬ್‌ನ ಹರದೀಪ್ ಸಿಂಗ್ ಪುರಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ, ಕೇರಳದ ಅಲ್ಫೋನ್ಸ್ ಕಣ್ಣನ್ ದಾನಮ್ ಅವರು ಕೇಂದ್ರ ಸಂಪುಟ ಸೇರುತ್ತಿದ್ದಾರೆ. ಈ ಮೂವರೂ ಅಧಿಕಾರಿಗಳು ಸಂಸತ್ ಸದಸ್ಯರಲ್ಲದಿದ್ದರೂ ಬಿಜೆಪಿ ವರಿಷ್ಠರು ಅಧಿಕಾರಿಗಳ ದಕ್ಷತೆ ಆಧಾರ ಮೇಲೆ ಅವರಿಗೆ ಸ್ಥಾನ ನೀಡಿದ್ದಾರೆ.