ರಾಮ್ ರಹೀಮ್ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆ!

ಬಾಬಾ ರಾಮ್ ರಹೀಮ್ ಅವರ ಡೇರಾ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ವೇಳೆ ರಾಮ್ ರಹೀಮ್ ಅವರ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆಯಾಗಿದೆ.
ರಾಮ್ ರಹೀಮ್ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆ!
ರಾಮ್ ರಹೀಮ್ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆ!
ಸಿರ್ಸಾ: ಬಾಬಾ ರಾಮ್ ರಹೀಮ್ ಅವರ ಡೇರಾ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ವೇಳೆ ರಾಮ್ ರಹೀಮ್ ಅವರ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆಯಾಗಿದೆ. 
ಇದೇ ವೇಳೆ ಅಕ್ರಮ ಪಟಾಕಿ ಕಾರ್ಖಾನೆ ಹಾಗೂ ರಾಸಾಯನಿಕಗಳೂ ಸಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೇರಾ ಸಚ್ಚಾದ ಮುಖ್ಯಸ್ಥ ಇದ್ದ ಗೂಫಾದಲ್ಲಿ ಸುರಂಗ ಪತ್ತೆಯಾಗಿದ್ದು, ಇದು ಬಾಬಾ ರಾಮ್ ರಹೀಮ್ ನ ಮಹಿಳಾ ಭಕ್ತರು ಇರುವ ಸಾಧ್ವಿ ನಿವಾಸಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಸತೀಶ್ ಮೆಹ್ರಾ ಮಾಹಿತಿ ನೀಡಿದ್ದಾರೆ. 
ಅಷ್ಟೇ ಅಲ್ಲದೇ ಡೇರಾ ಕ್ಯಾಂಪಸ್ ನ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಪಟಾಕಿ ಕಾರ್ಖಾನೆ ಇರುವುದೂ ಪತ್ತೆಯಾಗಿದ್ದು, ಕಾರ್ಟಿಡ್ಜ್ ಗಳನ್ನಿಡುವ ಖಾಲಿ ಬಾಕ್ಸ್ ಹಾಗೂ ಎಕೆ 47 ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೆಹ್ರಾ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com