ಇದೇ ವೇಳೆ ತಮ್ಮ ಪಕ್ಷದಲ್ಲಿ 89 ಶಾಸಕರಿದ್ದು, ಕಾಂಗ್ರೆಸ್ ನ 8 ಶಾಸಕರು, ಐಯುಎಂಎಲ್ ಪಕ್ಷ ಓರ್ವ ಶಾಸಕ ಹಾಗೂ ಎಐಎಡಿಎಂಕೆ ಪಕ್ಷದ 21 ರೆಬಲ್ ಶಾಸಕರು ತಮ್ಮೊಂದಿಗೆ ಇದ್ದಾರೆ. ಈ ಎಲ್ಲ ಶಾಸಕರನ್ನು ಒಟ್ಟುಗೂಡಿಸಿದರೆ 119 ಆಗುತ್ತದೆ. ಹೀಗಾಗಿ ತಮಗೆ ಬಹುಮತವಿದ್ದು, ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಬಹುಮತ ಸಾಬೀತಿಗೆ ಸಿಎಂ ಪಳನಿಸ್ವಾಮಿಗೆ ಸೂಚಿಸಬೇಕು. ಇಲ್ಲವಾದರೆ ರಾಜ್ಯಪಾಲರ ವಿರುದ್ಧ ಕಾನೂನು ಸಮರ ನಡೆಸಬೇಕಾಗುತ್ತದೆ ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.