25 ಸಾವಿರ ರೂ.ಗೆ ಮಗುವನ್ನು ಮಾರಿ ಮೊಬೈಲ್, ಬಟ್ಟೆ, ಆಲ್ಕೋಹಾಲ್ ಖರೀದಿಸಿದ ತಂದೆ!

ಒಡಿಶಾದ ಭದ್ರಕ್ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ 11 ತಿಂಗಳ ಗಂಡು ಮಗುವನ್ನು 25 ಸಾವಿರ ರೂಪಾಯಿಗೆ ಮಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭುವನೇಶ್ವರ: ಒಡಿಶಾದ ಭದ್ರಕ್ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ 11 ತಿಂಗಳ ಗಂಡು ಮಗುವನ್ನು 25 ಸಾವಿರ ರೂಪಾಯಿಗೆ ಮಾರಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಗನನ್ನು ಮಾರಾಟ ಮಾಡಿದ ಈ ಭೂಪ ಬಂದ ಹಣದಲ್ಲಿ ಮೊಬೈಲ್ ಫೋನ್, ಬೆಳ್ಳಿ ಕಂಕಣ ಮತ್ತು ಆಲ್ಕೊಹಾಲ್ ಖರೀದಿಸಿದ್ದಾನೆ.
ಮಗುವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಬಲರಾಮ್ 2,000 ರೂಪಾಯಿಗಳನ್ನು ಮೊಬೈಲ್ ಫೋನ್, 1,500 ರೂಪಾಯಿಗಳಲ್ಲಿ 7 ವರ್ಷದ ಮಗಳಿಗೆ ಬೆಳ್ಳಿ ಕಂಕಣ, ಪತ್ನಿಗೆ ಒಂದು ಸೀರೆ ಹಾಗೂ ಉಳಿದ ಹಣವನ್ನು ತನ್ನ ಮದ್ಯ ಸೇವನೆಗೆ ಇಟ್ಟುಕೊಂಡಿದ್ದಾನೆ.
ಪೊಲೀಸರು ಈತನನ್ನು ಬಂಧಿಸಿ, ಪತ್ನಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ದಂಪತಿಗೆ 10 ವರ್ಷದ ಮತ್ತೊಬ್ಬ ಮಗನಿದ್ದಾನೆ.
ಬಲರಾಮ್ ಮುಖಿಗೆ ನಿಶ್ಚಿತ ಆದಾಯವಿರಲಿಲ್ಲ. ಗುಡಿಸುವ ಕೆಲಸ ಮಾಡುತ್ತಿದ್ದ ಆತ ಮದ್ಯವ್ಯಸನಿ ಕೂಡ ಆಗಿದ್ದ. ಮುಖಿಯ ಬಾವ ಕೂಡ ಮಗುವಿನ ಮಾರಾಟದಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ಬದ್ರಕ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನೂಪ್ ಸಾಹೂ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ಚಾಲಕ ನೌಕರರಾಗಿದ್ದ ಸೋಮನಾಥ್ ಸೇತಿ ಕೆಲಸದಿಂದ ನಿವೃತ್ತರಾಗಿದ್ದರು. ಅವರು ಮತ್ತು ಅವರ ಪತ್ನಿ 2014ರಲ್ಲಿ ತಮ್ಮ 24 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಮಗನ ಮರಣ ನಂತರ ಸೇತಿಯವರ ಪತ್ನಿ ಖಿನ್ನತೆಗೆ ಜಾರಿದ್ದರು. ಹೀಗಾಗಿ ಸೇತಿ ಮಗುವೊಂದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳುತ್ತಾರೆ.
ಇದೀಗ ಪೊಲೀಸರು ಆ ವೃದ್ಧ ದಂಪತಿಯನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com