ಉತ್ತರ ಪ್ರದೇಶ: ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಸಾವು

ಉತ್ತರ ಪ್ರದೇಶದ ಭಾಗ್ ಪತ್ ಬಳಿ ಯಮುನಾ ನದಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಇಪ್ಪತ್ತೆರಡು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಸಾವು
ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಸಾವು
Updated on
ಲಖ್ನೋ: ಉತ್ತರ ಪ್ರದೇಶದ ಭಾಗ್ ಪತ್ ಬಳಿ ಯಮುನಾ ನದಿಯಲ್ಲಿ  ಸಂಭವಿಸಿದ ದೋಣಿ ದುರಂತದಲ್ಲಿ  ಇಪ್ಪತ್ತೆರಡು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
24 ಮಂದಿ ಪ್ರಯಾಣಿಸುತ್ತಿದ್ದ ಈ ದೋಣಿ ಹರಿಇಯಾಣ ಕಡೆ ಹೊರಟಿತ್ತೆನ್ನಲಾಗಿದೆ. ಪೊಲೀಸ್ ಮತ್ತು ಪ್ರಾಂತೀಯ ಸಿಬ್ಬಂದಿಗಳು ಅವಘಡ ನಡೆದ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಇಲ್ಲಿಯವರೆಗೆ, ಆರು ದೇಹಗಳನ್ನು ಹೊರಹಾಕಲಾಗಿದೆ. ದೋಣಿಯಲ್ಲಿದ್ದ ಸುಮಾರು ಹನ್ನೆರಡು ಜನರನ್ನು ರಕ್ಷಿಸಲಾಗಿದೆ. ಸಾವು ನೋವುಗಳ ಸಂಖ್ಯೆ ಹೆಚ್ಚಳವಾಗಬಹುದು ಎಂದು ಪೋಲೀಸರು ತಿಳಿಸಿದರು
ದೋಣಿಯ ನೈಜ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಅದರಲ್ಲಿ ಪ್ರಯಾಣಿಸುತ್ತಿದ್ದದ್ದೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com