ಮುಂಬೈ: ದೇಶದ ಅತಿ ದೊಡ್ಡ ಈರುಳ್ಳಿ ವ್ಯಾಪಾರಿಗಳ ಮನೆ ಮೇಲೆ ಐಟಿ ದಾಳಿ

ನಾಶಿಕ್ ಜಿಲ್ಲೆಯಲ್ಲಿರುವ ಹಲವು ದೇಶದ ಅತಿ ದೊಡ್ಡ ಈರುಳ್ಳಿ ವ್ಯಾಪಾರಿಗಳಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಗುರುವಾರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ನಾಶಿಕ್ ಜಿಲ್ಲೆಯಲ್ಲಿರುವ ಹಲವು ದೇಶದ ಅತಿ ದೊಡ್ಡ ಈರುಳ್ಳಿ ವ್ಯಾಪಾರಿಗಳಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಐಟಿ ದಾಳಿಯ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಸಲಗಾಂವನ ಹರಾಜು ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಶಿಕ್ ಜಿಲ್ಲೆಯಲ್ಲಿರುವ ಏಳು ಅತಿ ದೊಡ್ಡ ಈರುಳ್ಳಿ ವ್ಯಾಪಾರಿಗಳ ಕಚೇರಿ, ಮನೆ ಹಾಗೂ ಗೋದಾಮುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಧ್ಯಾಹ್ನದ ನಂತರವೂ ದಾಳಿ ಮುಂದುವರೆಯಲಿದೆ ಎಂದು ಐಟಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಶಿಕ್ ವಿಭಾಗದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಅವರು ಹೇಳಿದ್ದಾರೆ.
ದಾಳಿಯ ವೇಳೆ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ಮತ್ತು ಅವರ ಕಚೇರಿ ಹಾಗೂ ಗೋದಾಮುಗಳನ್ನು ಜಪ್ತಿ ಮಾಡಿದ್ದು, ಕಳೆದ ತಿಂಗಳು ಅವರು ನಡೆಸಿದ ವಹಿವಾಟನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com