ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಪಾರ್ಕ್ಡ್ ಗ್ರೌಂಡ್ ಕೂಲಿಂಗ್ ಯೂನಿಟ್(ಜಿಸಿಯು) ಯಂತ್ರವನ್ನು ಹೊತ್ತಿದ್ದ ಟ್ರಕ್ ಒಂದಕ್ಕೆ ವಡೋದರಾದಿಂದ ಆಗಮಿಸಿದ್ದ...
ಏರ್ ಇಂಡಿಯಾ
ಏರ್ ಇಂಡಿಯಾ
Updated on: 
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಪಾರ್ಕ್ಡ್ ಗ್ರೌಂಡ್ ಕೂಲಿಂಗ್ ಯೂನಿಟ್(ಜಿಸಿಯು) ಯಂತ್ರವನ್ನು ಹೊತ್ತಿದ್ದ ಟ್ರಕ್ ಒಂದಕ್ಕೆ ವಡೋದರಾದಿಂದ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. 
ಕಳೆದ ರಾತ್ರಿ 9.45ರ ಸುಮಾರಿಗೆ ಈ ಅವಘಡ ಸಂಭವಿಸಿದೆ. 319 ಏರ್ ಬಸ್ ನಲ್ಲಿ ಸುಮಾರು 114 ಮಂದಿ ಪ್ರಯಾಣಿಕರಿದ್ದರು. ಇನ್ನು ಅಪಘಾತದಲ್ಲಿ ಯಾವುದೇ ಪ್ರಯಾಣಿಕನು ಗಾಯಗೊಂಡಿಲ್ಲ. ವರದಿಯಾಗಿಲ್ಲ.
ಪಾರ್ಕ್ಡ್ ಗ್ರೌಂಡ್ ಕೂಲಿಂಗ್ ಯೂನಿಟ್(ಜಿಸಿಯು) ಯಂತ್ರವನ್ನು ಪಾರ್ಕಿಂಗ್ ಸ್ಥಳಗಳಲ್ಲಿರುವ ವಿಮಾನಗಳ ಇಂಜಿನ್ ನ ಉಷ್ಣಾಂಶವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com