ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಬಂಧನ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬೈ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ದಾವೂದ್ ಸಹೋದರ ಇಕ್ಬಾಲ್ ಬಂಧನ
ದಾವೂದ್ ಸಹೋದರ ಇಕ್ಬಾಲ್ ಬಂಧನ
Updated on
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬೈ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸುಲಿಗೆ ಪ್ರಕರಣದ ಆರೋಪದಡಿಯಲ್ಲಿ ಕೇಂದ್ರ ಮುಂಬೈನ ನಾಗಪಾದ್ ಪ್ರದೇಶದಲ್ಲಿರುವ ಇಕ್ಬಾಲ್ ಕಸ್ಕರ್ ನಿವಾಸದಿಂದಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಎನ್ ಕೌಂಟರ್  ಸ್ಪೆಷಲಿಸ್ಟ್ ಮತ್ತು ಸುಲಿಗೆ ನಿಗ್ರಹ ದಳದ ಹಿರಿಯ ಅಧಿಕಾರಿ ಇನ್ಸ್ ಪೆಕ್ಟರ್ ಪ್ರದೀಪ್ ಶರ್ಮಾ ಅವರ ನೇತೃತ್ವದಲ್ಲಿ ನಿನ್ನೆ ತಡರಾತ್ರಿ ದಾಳಿ ಮಾಡಲಾಗಿದ್ದು, ಅಜ್ಞಾತ ಸ್ಥಳದಲ್ಲಿ ಇಕ್ಬಾಲ್ ನನ್ನು ವಿಚಾರಣೆ ನಡೆಸಲಾಗುತ್ತಿದೆ  ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾಕರ ಮುಂಬೈನ ಥಾಣೆ ಮೂಲದ ಉದ್ಯಮಿಯೊಬ್ಬರಿಗೆ ಕೆಲ ಅನಾಮಧೇಯ ವ್ಯಕ್ತಿಗಳು ತಾವು ಇಕ್ಬಾಲ್ ಅನ್ಸಾರಿ ಹುಡುಗರು ಎಂದು ಹೇಳಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರಂತೆ. ಈ ಬಗ್ಗೆ ಉದ್ಯಮಿ ಮುಂಬೈ  ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಇಕ್ಬಾಲ್ ನನ್ನು ನಿನ್ನೆ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

2003ರಲ್ಲಿ ಅಕ್ರಮ ಕಟ್ಟಡನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಇಯಿಂದ ಇಕ್ಬಾಲ್ ನನ್ನು ಗಡಿಪಾರು ಮಾಡಲಾಗಿತ್ತು. ಬಳಿಕ ಮುಂಬೈಗೆ ಬಂದು ನೆಲೆಸಿದ್ದ ಆತ ಕಾನೂನು ಹೋರಾಟ ಮಾಡಿ 2007ರಲ್ಲಿ ತನ್ನ  ವಿರುದ್ಧ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com