ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾತಕಿ ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ: ಸಹೋದರ ಕಸ್ಕರ್ ಹೇಳಿಕೆ

ಭೂಗತ ಪಾತಕಿ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂದು ಆತನ ಸಹೋದರ ಇಕ್ಬಾಲ್ ಕಸ್ಕರ್ ಹೇಳಿದ್ದಾನೆ.
Published on
ಮುಂಬೈ: ಭೂಗತ ಪಾತಕಿ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂದು ಆತನ ಸಹೋದರ ಇಕ್ಬಾಲ್ ಕಸ್ಕರ್  ಹೇಳಿದ್ದಾನೆ.
ಸುಲಿಗೆ ಪ್ರಕರಣ ಸಂಬಂಧ ಮುಂಬೈನ ಥಾಣೆ ಪೊಲೀಸರಿಂದ ಬಂಧನಕ್ಕೀಡಾಗಿರುವ ಇಕ್ಬಾಲ್ ಕಸ್ಕರ್, ತನ್ನ ಸಹೋದರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂದು ಹೇಳಿದ್ದಾನೆ.  ಪ್ರಮುಖವಾಗಿ ದಾವೂದ್ ಇಬ್ರಾಹಿಂಗೆ ಭಾರತ ಸರ್ಕಾರದ ಕುರಿತು ಆತಂಕವಿದ್ದು, ಇದೇ ಕಾರಣಕ್ಕೆ ಆಗಾಗ ಮನೆ ಬದಲಿಸುತ್ತಿದ್ದಾನೆ. ಪ್ರಮುಖವಾಗಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ  ಎಂದು ಕಸ್ಕರ್ ಮಾಹಿತಿ ನೀಡಿದ್ದಾನೆ.

ಅಲ್ಲದೆ ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿ ಇದ್ದುಕೊಂಡು ಪೂರ್ವ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಹೂಡಿಕೆ ಮಾಡಿ ತನ್ನ ವಾಣಿಜ್ಯ ವಹಿವಾಟು ನಡೆಸುತ್ತಿದ್ದಾನೆ. ದಾವೂದ್ ಲ್ಯಾಟಿನ್ ಅಮೆರಿಕ ಮೂಲದ ಮಾದಕವವಸ್ತು  ದಂಧೆಕೋರರೊಂದಿಗೆ ನಂಟಿದ್ದು, ದಾವೂದ್ ಪಾಕಿಸ್ತಾನದಲ್ಲಿ ಅತ್ಯಂತ ಬಿಗಿ ಭದ್ರತೆ ಇದ್ದು, ಸದಾಕಾಲ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಆತನ ನೆರವಿಗಿರುತ್ತಾರೆ ಎಂದು ಕಸ್ಕರ್ ಹೇಳಿದ್ದಾನೆ.

2003ರವರೆಗೂ ಯುನೈಟೆಡ್ ಅರಬ್ ನಲ್ಲಿ ಇದ್ದ ಕಸ್ಕರ್ ಅಲ್ಲಿ ರಿಯಲ್ ಎಸ್ಟೇಟ್ ಅಕ್ರಮವೆಸಗಿ ಭಾರತಕ್ಕೆ ಗಡಿಪಾರಾಗಿ ಬಂದಿದ್ದ. ಇತ್ತೀಚೆಗೆ ಈತನನ್ನು  ಮುಂಬೈ ಪೊಲೀಸರು ಸಲಿಗೆ ಪ್ರಕರಣ ಸಂಬಂಧ ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com