ಕಮಲ್, ಕೇಜ್ರಿ ಇಬ್ಬರು ಜಿರೋಗಳು ಸೇರಿದರೆ ಏನು ಪ್ರಯೋಜನವಿಲ್ಲ: ಸ್ವಾಮಿ

ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಹಿನ್ನೆಲೆಯ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಸುಬ್ರಮಣಿಯನ್...
ಅರವಿಂದ್ ಕೇಜ್ರಿವಾಲ್-ಕಮಲ್ ಹಾಸನ್
ಅರವಿಂದ್ ಕೇಜ್ರಿವಾಲ್-ಕಮಲ್ ಹಾಸನ್
Updated on: 
ನವದೆಹಲಿ: ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಹಿನ್ನೆಲೆಯ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಇಬ್ಬರು ಜಿರೋಗಳು ಸೇರಿದರೆ ಅವರಿಂದ ಏನು ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. 
ಕಮಲ್ ಹಾಸನ್ ಒಬ್ಬ ಜಿರೋ ಹಾಗೂ ವೈಭವದ ಈಡಿಯಟ್ ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಒಂದು ಜಿರೋ ಆಗಿದ್ದು ಅವರಿಬ್ಬರು ಒಟ್ಟಾದರೆ ಅದರಿಂದ ಏನು ಪ್ರಯೋಜನವಾಗಲ್ಲ. ಶಾಲೆಯಲ್ಲಿ ಹೇಳಿಕೊಟ್ಟಿಲ್ವೇ ಜಿರೋ ಪ್ಲಸ್ ಜಿರೋ.. ಜಿರೋನೇ ಅಲ್ವ ಎಂದು ಸ್ವಾಮಿ ಹೇಳಿದ್ದಾರೆ. 
ಸಿನಿಮಾ ನಟರು ಹಾಗೂ ರಾಜಕೀಯ ನಾಯಕರ ಕುರಿತು ಸ್ವಾಮಿ ಅವರನ್ನು ಪ್ರಶ್ನಿಸಿದಾಗ, ಯಾವುದೇ ಕಡೆಯಲ್ಲಾಗಲಿ ಒಬ್ಬ ಸಿನಿಮಾ ನಟ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಅವರು ಫ್ಲಾಪ್ ಆಗಿದ್ದಾರೆ. ಅವರಿಗೆ ತರಬೇತಿ ಕೊಟ್ಟರು ಪ್ರಯೋಜನವಿಲ್ಲ. ಇನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ರಾಜಕೀಯದಲ್ಲಿ 20 ವರ್ಷ ಸಕ್ರಿಯವಾಗಿ ಭಾಗಿಯಾಗಿದ್ದರಿಂದ ಅವರು ಮುಂದೆ ನಾಯಕಿಯಾಗಿ ಗುರುತಿಸಿಕೊಂಡರು ಎಂದು ಹೇಳಿದರು. 
ನಿನ್ನೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ನಟ ಕಮಲ್ ಹಾಸನ್ ಅವರನ್ನು ಅವರ ಚೆನ್ನೈನ ನಿವಾಸದಲ್ಲಿ ಭೇಟಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com