ನವದೆಹಲಿ: ಕೇವಲ 22 ವಾರಗಳಲ್ಲಿಯೇ ಜನಿಸಿರುವ ಮುಂಬೈ ನ ಮಗು ನಿರ್ವಾಣ್ ದೇಶದ ಅತ್ಯಂತ ಕಿರಿಯ ಅವಧಿಪೂರ್ವ ಮಗುವಾಗಿದೆ.
ನಿರ್ವಾಣ್ 132 ದಿನಗಳ ಕಾಲ ಎನ್ಐಸಿಯು ನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದು, ಅತ್ಯಂತ ಕಿರಿಯ ಅವಧಿಪೂರ್ವ ಪೂರ್ವ ಮಗುವಾಗಿದ್ದರೂ ಸಹಜವಾದ ಮೆದುಳು, ದೃಷ್ಟಿ, ಶ್ರವಣ ಹಾಗೂ ನರಗಳ ಅಭಿವೃದ್ಧಿಯನ್ನು ಹೊಂದಿದೆ.
ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ನಿರ್ವಾಣ್ ಗೆ 14 ವೈದ್ಯರು ಚಿಕಿತ್ಸೆ ಕೊಡಿಸಿದ್ದು 50 ನರ್ಸಿಂಗ್ ಸಿಬ್ಬಂದಿಗಳು ಚಿಕಿತ್ಸೆ ನೀಡಿದ್ದಾರೆ. ಗರ್ಭಧಾರಣೆಯ ನಂತರ 22 ವಾರಗಳ ನಂತರ 2017 ರ ಮೇ.12 ರಂದು ಜನಿಸಿದ್ದ ನಿರ್ವಾಣ್ ಹುಟ್ಟಿದಾಗ 610 ಗ್ರಾಂಗಳಷ್ಟು ತೂಕ, 32 ಸೆಂಟಿಮೀಟರ್ ಉದ್ದವಿದ್ದ ಎಂದು ತಿಳಿದುಬಂದಿದೆ.