ಅತ್ಯಾಚಾರ ಪ್ರಕರಣ: ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧ ಆರೋಪ ಪಟ್ಟಿ ದಾಖಲು

ತೆಹಲ್ಕಾ ದ ಮಾಜಿ ಸಂಪಾದಕ, ಮುಖ್ಯಸ್ಥ ತರುಣ್ ತೇಜ್ ಪಾಲ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ........
ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್
ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್
ನವದೆಹಲಿ:ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ  ತೆಹಲ್ಕಾದ ಮಾಜಿ ಸಂಪಾದಕ ತೇಜ್ ಪಾಲ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಗೋವಾ ನ್ಯಾಯಾಲಯ ಇಂದು ಇಂದು ಅನುಮತಿ ನೀಡಿದೆ.
ತೆಹಲ್ಕಾದ ಮಾಜಿ ಸಂಪಾದಕ ತೇಜ್ ಪಾಲ್ ಅತ್ಯಾಚಾರ, ಲೈಂಗಿಕ ಕಿರುಕುಳ, ಸಂಯಮ ರಹಿತ ವರ್ತನೆ ಆರೋಪ ಹೊತ್ತಿದ್ದಾರೆ.
ತನ್ನ ಮೇಲಿನ ಆರೋಪದ ವಿವರಗಳನ್ನು ತರುಣ್ ತೇಕಜ್ ಪಾಲ್ ಸಹ ಕೇಳಿಸಿಕೊಂಡಿದ್ದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಫ್ರಾನ್ಸಿಸ್ಕೋ ತವೈರಾ ಎಎನ್ ಐ ಸುದ್ದಿವಾಹಿನಿಗೆ ತಿಳಿಸಿದರು.
ತೇಜ್ ಪಾಲ್ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ನಿರಾಕರಿಸಿದ ನ್ಯಾಯಾಲಯವು ಅ. 21 ರೊಳಗೆ ಪ್ರಕರಣದ ಸ್ಥಿತಿ ಗತಿ ವರದಿ ಸಲ್ಲಿಸುವಂತೆ ಕೋರಿದೆ.
ತರುಣ್ ತೇಜ್ ಪಾಲ್ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ತಿಂಗಳ ಕಾಲ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಮಾಪುಸಾ ಹೆಚ್ಚುವರಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯವು ವೀಡಿಯೋ ವಿಚಾರಣೆ ಮೂಲಕ ಈ ಆದೇಶ ನೀಡಿದೆ.
ತೇಜ್ ಪಾಲ್ ಮಂಗಳವಾರ ಗೋವಾದ ಬಾಂಬೆ ಹೈ ಕೋರ್ಟ್ ನಿಂದ ಪ್ರಕರಣದ ಕುರಿತು ಯಾವುದೇ ವಿನಾಯ್ತಿ ಪಡೆಯುವಲ್ಲಿ ವಿಫಲರಾಗಿದ್ದರು. ಕೆಳ ನ್ಯಾಯಾಲಯದಲ್ಲಿ ತೇಜ್ ಪಾಲ್ ವಿರುದ್ಧ ವಿಚಾರಣೆಗೆ ತಡೆ ಹಾಕಲು ಹೈಕೋರ್ಟ್ ನಿರಾಕರಿಸಿತ್ತು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com