ದೇಶ

ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಅಧ್ವಾನ : ಊಟಕ್ಕಾಗಿ ನೂಕು ನುಗ್ಗಲು; ರಟ್ ಬಾಕ್ಸ್ ಗಳಲ್ಲಿ ಆಹಾರ ಸೇವಿಸಿದ ಜನರು!

ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಅಧ್ವಾನ : ಊಟಕ್ಕಾಗಿ ನೂಕು ನುಗ್ಗಲು; ರಟ್ ಬಾಕ್ಸ್ ಗಳಲ್ಲಿ ಆಹಾರ ಸೇವಿಸಿದ ಜನರು!
ಶಾಸಕ ಅನಂತ್ ಸಿಂಗ್ ಪುತ್ರಿ ವಿವಾಹ
Published On :

ಪಾಟ್ನಾ: ಬಿಹಾರದ ಮೊಕಾಮಾದ ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹವು ಹಲವು ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಬುಧವಾರ ನಡೆದ ಈ ಮದುವೆಗೆ ಸುಮಾರು ಹತ್ತು ಲಕ್ಷ ಅತಿಥಿಗಳು ಆಗಮಿಸಿದ್ದರು ಎಂದು ವರದಿಯಾಗಿದೆ.

ಮದುವೆಯ ಸಮಾರಂಭದ ವಿವಿಧ ದೃಶ್ಯಗಳು, ಅಲ್ಲಿ ಉಂಟಾದ ಗೊಂದಲಗಳು ಸೇರಿದಂತೆ ಹಲವು ಸಂಗ್ರಹಗಳು ವಿಡಿಯೋಗಳಲ್ಲಿ ಸೆರೆಯಾಗಿವೆ. ಅತಿಥಿಗಳ ಸಂಖ್ಯೆ ಹೆಚ್ಚಾದ್ದರಿಂದ ಏರ್ಪಡಿಸಿದ್ದ ವ್ಯವಸ್ಥೆಗಳು ಸಾಲದಾದವು. ಆಗ ಅತಿಥಿಗಳು ವಿಭಿನ್ನ ಉಪಾಯಗಳನ್ನು ಕಂಡುಕೊಂಡರು. ಜನರು ನೀರು ಕುಡಿಯುವ ಲೋಟಗಳನ್ನೇ ತಟ್ಟೆಗಳಾಗಿ ಬಳಸಿಕೊಂಡರು, ಅಡುಗೆ ಮಾಡಿದ ದೊಡ್ಡ ಪಾತ್ರೆಗಳಿಂದ ನೇರವಾಗಿ ಆಹಾರವನ್ನು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

ಈ ವಿವಾಹ ಸಮಾರಂಭದ ಅನಿರೀಕ್ಷಿತ ವ್ಯವಸ್ಥೆಗಳು ಮತ್ತು ಸಿಹಿತಿಂಡಿಗಳನ್ನು ಪಡೆಯಲು ಜನರು ಮುಗಿಬಿದ್ದ ದೃಶ್ಯಗಳನ್ನು ಒಳಗೊಂಡಿರುವ ಇತರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

ಬಿಹಾರದಾದ್ಯಂತ 'ಛೋಟೆ ಸರ್ಕಾರ' ಎಂದೇ ಖ್ಯಾತರಾಗಿರುವ ಸಿಂಗ್, ಈ ಮದುವೆಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದರು. ಇದರ ಪರಿಣಾಮವಾಗಿ ಜನಸಾಗರವೇ ಹರಿದುಬಂದಿತ್ತು. ಮದುವೆಯ ಔತಣಕೂಟವು ನಾಡ್ವಾನ್ ಗ್ರಾಮದಲ್ಲಿ ನಡೆಯಿತು, ಆದರೆ ಅಲ್ಲಿ ನೆರೆದಿದ್ದ ಜನಸಂದಣಿಯನ್ನು ನಿಭಾಯಿಸಲು ಆಯೋಜಕರು ಹರಸಾಹಸ ಪಡಬೇಕಾಯಿತು.

ಸಿಹಿತಿಂಡಿಗಳ ಕೌಂಟರ್ ಒಂದು ರಣರಂಗದಂತೆಯೇ ಮಾರ್ಪಟ್ಟಿತ್ತು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ರಸಗುಲ್ಲಾಗಳು ಮಾಯವಾಗಿದ್ದವು. ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅತಿಥಿಯೊಬ್ಬರು, "ಇಲ್ಲಿ ಊಟ ಪಡೆಯುವುದು ಯುದ್ಧ ಗೆದ್ದಂತೆ" ಎಂದು ಪರಿಸ್ಥಿತಿಯನ್ನು ಬಣ್ಣಿಸಿದ್ದಾರೆ.

ನೆಲಕ್ಕೆ ಬಿದ್ದ ಆಹಾರವನ್ನೂ ಜನರು ಎತ್ತಿಕೊಂಡು ತಿನ್ನುತ್ತಿರುವ ವಿಡಿಯೋಗಳನ್ನು ಕಂಡು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯ ಸಂಭ್ರಮದ ನಡುವೆ ಒಂದು ಹೊತ್ತಿನ ಊಟಕ್ಕಾಗಿ ಜನರು ಈ ರೀತಿ ಪರದಾಡುತ್ತಿರುವ ದೃಶ್ಯಗಳು ನೋವುಂಟುಮಾಡುತ್ತವೆ. ದೇಶದ ಜನರ ಸಾಮೂಹಿಕ ಪ್ರಜ್ಞೆ ಮತ್ತು ಸ್ವಾಭಿಮಾನ ಎಲ್ಲಿ ಹೋಗಿದೆ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.

ಈ ಘಟನೆಗೆ ದೇಶದ ಹಸಿವಿನ ಸಮಸ್ಯೆಯನ್ನೂ ಜೋಡಿಸಿ ಟೀಕೆ ಮಾಡಲಾಗುತ್ತಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ, ಆಹಾರಕ್ಕಾಗಿ ಜನರು ಪರದಾಡುತ್ತಿರುವ ದೃಶ್ಯಗಳು ಮತ್ತು ದೇಶದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಬೃಹತ್ ಜನಸಂದಣಿಯಿಂದಾಗಿ ಸುಮಾರು 5 ರಿಂದ 10 ಕಿಲೋಮೀಟರ್‌ಗಳಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು. ಜನರು ಕಾರುಗಳಲ್ಲಿ, ಟ್ರಾಕ್ಟರ್‌ಗಳಲ್ಲಿ ಹಾಗೂ ಕೆಲವರು ನಡೆದುಕೊಂಡೇ ಮದುವೆಗೆ ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.